ಮರ್ಮಾಂಗಕ್ಕೆ ತ್ರಿಶೂಲವನ್ನು ಚುಚ್ಚಿಕೊಂಡ ಯುವಕ

ಮರ್ಮಾಂಗಕ್ಕೆ ತ್ರಿಶೂಲವನ್ನು ಚುಚ್ಚಿಕೊಂಡ ಯುವಕ

ಧಾರವಾಡ;ಮೊಬೈಲ್ ಕರೆನ್ಸಿ ಹಾಕಲು ತಂದೆ ದುಡ್ಡು ಕೊಡಲಿಲ್ಲವೆಂದು ಯುವಕನೋರ್ವ ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡು ಗಂಭೀರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ನವಲೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಬಸವರಾಜ ಅವರ ಮಗ ಮೈಲಾರಿ ಮರ್ಮಾಂಗಕ್ಕೆ ತ್ರಿಶೂಲ ಚುಚ್ಚಿಕೊಂಡ ಯುವಕ.

ನಿರುದ್ಯೋಗಿ ಯುವಕ ನಿರಂತರವಾಗಿ ಮೊಬೈಲ್ ನಲ್ಲೇ ಕಾಲ ಕಳೆಯುತ್ತಿದ್ದ. ಮಂಗಳವಾರ ಮೊಬೈಲ್​ ಕರೆನ್ಸಿ ಖಾಲಿಯಾಗಿತ್ತು. ಹೀಗಾಗಿ ತನ್ನ ತಂದೆ ಬಳಿ ಹಣ ಕೇಳಿದ್ದಾನೆ. ತಂದೆ ಹಣ ಕೊಡದಿದ್ದಾಗ ಇಬ್ಬರ ನಡುವೆ ಜಗಳವಾಗಿದೆ.

ಇದರಿಂದ ಕೋಪಗೊಂಡ ಯುವಕ ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ತೆರಳಿದ್ದಾನೆ. ಅಲ್ಲಿದ್ದ ತ್ರಿಶೂಲವೊಂದನ್ನು ತೆಗೆದುಕೊಂಡು ತನ್ನ ಮರ್ಮಾಂಗಕ್ಕೆ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಇದನ್ನು‌ ಕಂಡ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಟಾಪ್ ನ್ಯೂಸ್