ತ್ರಿಶೂರ್ ನಲ್ಲಿ ಅಜ್ಜ-ಅಜ್ಜಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದವ ಮಂಗಳೂರಿನಲ್ಲಿ ಅರೆಸ್ಟ್; ಈತ ಸಿಕ್ಕಿ ಬಿದ್ದಿದ್ದೇಗೆ ಗೊತ್ತಾ?

-ಅಹಮ್ಮದ್ ಅಕ್ಮಲ್ ಬಂಧಿತ ಆರೋಪಿ

ಮಂಗಳೂರು;ತ್ರಿಶೂರ್ ನಲ್ಲಿ ತನ್ನ ಅಜ್ಜ-ಅಜ್ಜಿಯ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ.ಅಹಮ್ಮದ್ ಅಕ್ಮಲ್ (27)ಬಂಧಿತ ಆರೋಪಿ.ಈತ
ನಗರದಲ್ಲಿ ಚಿನ್ನಾಭರಣ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಮಾಹಿತಿ ಪಡೆದ ಪೊಲೀಸರ ಕಾರ್ಯಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ತ್ರಿಶೂರ್ ಜಿಲ್ಲೆಯ ವೈಲತ್ತೂರು ನಿವಾಸಿ ಅಹಮ್ಮದ್, ವಡೆಕ್ಕೆಕಾಡ್ ಎಂಬಲ್ಲಿ ಜುಲೈ 23 ರಂದು ರಾತ್ರಿ ತನ್ನ ಅಜ್ಜ ಮತ್ತು ಅಜ್ಜಿಯನ್ನು ಕೊಲೆ ಮಾಡಿ ಅವರ ಚಿನ್ನಾಭರಣಗಳನ್ನು ದೋಚಿ ಮಂಗಳೂರಿಗೆ ಬಂದಿದ್ದ.ಆತನ ವಿಚಾರಣೆ ನಡೆಸಿದಾಗ ಆತ ಕೃತ್ಯ ಬಾಯಿಬಿಟ್ಟಿದ್ದಾನೆ.

ಬಂಧಿತನಿಂದ ಮುತ್ತಿನ ಎರಡು ಎಳೆಯ ಬಂಗಾರದ ಸರ-1, ಸಣ್ಣ ಪದಕವಿರುವ ಚೈನ್ ಹಾಗೂ ಕಿವಿಯೊಲೆ-3, ಉಂಗುರ-5, ಕೈಬಳೆ-2 ಮತ್ತು ಪಾಸ್ ಪೋರ್ಟ್ ಹಾಗೂ ಇತರೆ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ.ಟಾಪ್ ನ್ಯೂಸ್