ತಿರುಚಿ; ಮೊಬೈಲ್ ಫೋನ್ ಚಾರ್ಜ್ ಇಟ್ಟು ಪೋನ್ ನಲ್ಲಿ ಮಾತನಾಡುವಾಗ ಮೊಬೈಲ್ ಸ್ಪೋಟಗೊಂಡು ಯುವತಿಯೋರ್ವಳು ಮೃತಪಟ್ಟ ಘಟನೆ ತಂಜಾವೂರಿನ ಪಾಪನಾಸಂನಲ್ಲಿ ಬುಧವಾರ ನಡೆದಿದೆ.
ತಂಜಾವೂರಿನ ಪಾಪನಾಸಂ ಬಳಿಯ ವಿಸಿತ್ರಾ ರಾಜಪುರಂ ಗ್ರಾಮದ ನಿವಾಸಿ ಪಿ ಗೋಕಿಲಾ (33) ಮೃತರು.ಇವರು
ತನ್ನ ಪತಿ ಪ್ರಭಾಕರನ್ ಅವರ ನಿಧನದ ನಂತರ ಮೊಬೈಲ್ ಸೇವಾ ಕೇಂದ್ರವನ್ನು ನಡೆಸುತ್ತಿದ್ದರು ಎಂದು ಹೇಳಲಾಗಿದೆ.
ಬುಧವಾರ ಗೋಕಿಲಾ ಚಾರ್ಜಿಂಗ್ ಮಾಡುವಾಗ ಇಯರ್ ಫೋನ್ ಬಳಸಿ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಿದ್ದರು.ಇದ್ದಕ್ಕಿದ್ದಂತೆ ಮೊಬೈಲ್ ಫೋನ್ ಸ್ಫೋಟಗೊಂಡು ಇಡೀ ಅಂಗಡಿಗೆ ಬೆಂಕಿ ಆವರಿಸಿದೆ.
ಘಟನೆಯಲ್ಲಿ ಗೋಕಿಲಾ ಅವರಿಗೆ ತೀವ್ರ ಸುಟ್ಟ ಗಾಯಗಳಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕೂಡಲೇ ನೆರೆಹೊರೆಯವರು ಅಂಗಡಿಗೆ ಓಡಿ ಬಂದು ಒಂದು ಬೆಂಕಿಯನ್ನು ನಂದಿಸಿದ್ದಾರೆ.
ಬಳಿಕ ಕಬಿಸ್ಥಲಂ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಹೊರತೆಗೆದಿದ್ದಾರೆ.