ಹೈದ್ರಾಬಾದ್; ತೆಲುಗು ಚಿತ್ರರಂಗದ ಯುವ ನಟ ಸುಧೀರ್ ವರ್ಮ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೈಜಾಗ್ ನಲ್ಲಿ ಘಟನೆ ನಡೆದಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.ಆದರೂ ವೈಯಕ್ತಿಕ ಕಾರಣದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
2013ರಲ್ಲಿ ಕಿಶೋರ್ ತಿರುಮಲ ನಿರ್ದೇಶನದ ಸೆಕೆಂಡ್ ಹ್ಯಾಂಡ್ ಸಿನಿಮಾ ಸುಧೀರ್ ವರ್ಮಾಗೆ ನಾಯಕನಾಗಿ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಆ ಬಳಿಕ ಅವರಿಗೆ ಹಲವು ಚಿತ್ರಗಳಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತ್ತು.
ಸ್ಥಳಕ್ಕೆ ಪೊಲೀಸರು ತೆರಳಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.