ಶಾಪಿಂಗ್ ಮಾಲ್ ನಲ್ಲಿ ತೆಲಂಗಾಣದ ಜಡ್ಜ್ ಪುತ್ರಿಯ ಗುಂಡಿಟ್ಟು ಹತ್ಯೆ, ಘಟನೆಯಲ್ಲಿ 8 ಮಂದಿ ಮೃತ್ಯು

ಹೈದರಾಬಾದ್: ಮೇ 6, 2023 ರಂದು ನಡೆದ ಟೆಕ್ಸಾಸ್ ಮಾಲ್ ಶೂಟಿಂಗ್‌ನಲ್ಲಿ ಹೈದರಾಬಾದ್‌ನ 27 ವರ್ಷದ ಐಶ್ವರ್ಯ ಎಂದು ಗುರುತಿಸಲಾದ ಯುವತಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಎಂಟು ಮಂದಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ‌.

ಪ್ರಸ್ತುತ ರಂಗಾರೆಡ್ಡಿ ಜಿಲ್ಲಾ ವಾಣಿಜ್ಯ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ತಾಟಿಕೊಂಡ ನರಸಿರೆಡ್ಡಿ ಅವರ ಪುತ್ರಿ ಮೃತರು.

ಟೆಕ್ಸಾಸ್‌ನ ಅಲೆನ್ ಪ್ರೀಮಿಯಂ ಔಟ್‌ಲೆಟ್ ಮಾಲ್‌ನಲ್ಲಿ ಐಶ್ವರ್ಯಾ ತನ್ನ ಸ್ನೇಹಿತರೊಂದಿಗೆ ಶಾಪಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಐಶ್ವರ್ಯಾ ಟೆಕ್ಸಾಸ್ ನಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು.ಪರ್ಫೆಕ್ಟ್ ಜನರಲ್ ಕಾಂಟ್ರಾಕ್ಟ್ಸ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

ನಿನ್ನೆ ಟೆಕ್ಸಾಸ್ ನಲ್ಲಿ ನಡೆದ ಶೂಟೌಟ್ ನಲ್ಲಿ ಎಂಟು ಜನರು ಮೃತಪಟ್ಟಿದ್ದರು.ಶನಿವಾರ ಮಧ್ಯಾಹ್ನ 3:30ರ ಸುಮಾರಿಗೆ ಗುಂಡಿನ ದಾಳಿ ಆರಂಭಗೊಂಡಿದ್ದು, ವ್ಯಾಪಾರಿಗಳು ಭಯಭೀತರಾಗಿ ಪ್ರದೇಶದಿಂದ ಓಡಿಹೋಗಿದ್ದಾರೆ.

ಗುಂಡೇಟಿನ ಸದ್ದು ಕೇಳಿಸಿದಾಗ ಅಡಗಿಕೊಳ್ಳಲು ಸ್ಟೋರೇಜ್ ಏರಿಯಾಗಳಿಗೆ ಉದ್ಯೋಗಿಗಳು ಪರದಾಡುತ್ತಿರುವುದು, ಶಾಪರ್‌ಗಳು ಮಾಲ್‌ನಿಂದ ನಿರ್ಗಮಿಸುತ್ತಿರುವುದು ವೀಡಿಯೊಗಳಲ್ಲಿ ಸೆರೆಯಾಗಿದೆ.

ಟಾಪ್ ನ್ಯೂಸ್

ಯುಎಇಯಲ್ಲಿ ಲುಲು ಯೂಸುಫ್ ಅಲಿಯ ಸಹೋದರನ ಪುತ್ರಿಯ ವಿವಾಹ; 4 ದಿನಗಳ ಕಾಲ ನಡೆದ ವಿವಾಹದಲ್ಲಿ 1000ಕ್ಕೂ ಅಧಿಕ ಸೆಲೆಬ್ರಿಟಿಗಳು ಭಾಗಿ, ಈ ವರ್ಷ ಯುಎಇಯಲ್ಲಿ ನಡೆದ ಅತಿದೊಡ್ಡ ಮದುವೆಯ ಸಿದ್ದತೆ ಹೇಗಿತ್ತು ಗೊತ್ತಾ?

ಯುಎಇ ನಿವಾಸಿಗಳು ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅತಿರಂಜಿತ ಸಮಾರಂಭ ಮತ್ತು ವರ್ಷದ ಅತಿದೊಡ್ಡ ವಿವಾಹ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

Developed by eAppsi.com