ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಿದ ವ್ಯಕ್ತಿಗೆ ಥಳಿತ, ಜೈಶ್ರೀರಾಂ ಘೋಷಣೆ ಕೂಗಿ ಮೆರವಣಿಗೆ

ತೆಲಂಗಾಣ;ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಬಗ್ಗೆ ವರದಿಯಾಗಿದೆ.

ಸಿದ್ದಿಪೇಟ್ ಜಿಲ್ಲೆಯ ಗಜ್ವೇಲ್ ಪಟ್ಟಣದಲ್ಲಿ “ಜೈ ಶ್ರೀ ರಾಮ್” ಘೋಷಣೆಗಳನ್ನು ಕೂಗುತ್ತ ಗುಂಪೊಂದು ಇಂತಹ ಕೃತ್ಯ ನಡೆಸಿದೆ.

ಮದ್ಯದ ಅಮಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ರಸ್ತೆ ವಿಭಜಕದ ಸಮೀಪ ವ್ಯಕ್ತಿಯಿಂದಲೇ ಬಲವಂತವಾಗಿ ಸ್ವಚ್ಛಗೊಳಿಸಿದ್ದ ಗುಂಪು ನಂತರ ಆತನನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಿ ಬಟ್ಟೆಗಳನ್ನು ಹರಿದು ಹಾಕಲಾಗಿದೆ ಎಂದು ವರದಿಯಾಗಿದೆ. ಮೂತ್ರ ಮಾಡಿದ ಸ್ಥಳದಲ್ಲಿ ಶಿವಾಜಿಯ ಪುತ್ಥಳಿ ಇತ್ತು ಎನ್ನಲಾಗಿದೆ.

ವೀಡಿಯೋ ಕೂಡ ಈ ಕುರಿತು ವೈರಲ್ ಆಗಿದ್ದು ಒಬ್ಬ ಪೋಲೀಸ್ ಸಿಬ್ಬಂದಿಯು ಗುಂಪಿನಿಂದ ವ್ಯಕ್ತಿಯನ್ನು ದೂರ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.

ಟಾಪ್ ನ್ಯೂಸ್