ಬ್ಯಾಂಕ್ ದರೋಡೆಗೆ ಯತ್ನಿಸಿ “ಒಳ್ಳೆಯ ಬ್ಯಾಂಕ್, ನನ್ನನ್ನು ಹಿಡಿಯಬೇಡಿ” ಎಂದು ನೋಟ್ ಬರೆದಿಟ್ಟು ಹೋದ ಕಳ್ಳ

ಬ್ಯಾಂಕ್ ದರೋಡೆಗೆ ಯತ್ನಿಸಿ “ಒಳ್ಳೆಯ ಬ್ಯಾಂಕ್, ನನ್ನನ್ನು ಹಿಡಿಯಬೇಡಿ” ಎಂದು ನೋಟ್ ಬರೆದಿಟ್ಟು ಹೋದ ಕಳ್ಳ

ತೆಲಂಗಾಣ; ದರೋಡೆಗೆ ಯತ್ನಿಸಿದ್ದ ಕಳ್ಳ ದರೋಡೆ ವಿಫಲವಾದ ಹಿನ್ನಲೆಯಲ್ಲಿ ‘ಒಳ್ಳೆಯ ಬ್ಯಾಂಕ್, ನನ್ನನ್ನು ಹಿಡಿಯಬೇಡಿ’ಎಂದು ನೋಟ್ ಬರೆದಿಟ್ಟು ಪರಾರಿಯಾಗಿದ್ದಾನೆ.

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮುಸುಕುಧಾರಿ ಕಳ್ಳರು ಗುರುವಾರ ನೆನ್ನೆಲ್ ಮಂಡಲ್ ಪ್ರಧಾನ ಕಚೇರಿಯಲ್ಲಿರುವ ಸರ್ಕಾರಿ ಗ್ರಾಮೀಣ ಬ್ಯಾಂಕ್ ಶಾಖೆಯ ಮುಖ್ಯ ಬಾಗಿಲಿನ ಬೀಗವನ್ನು ಮುರಿದು ಪ್ರವೇಶಿಸಿದ್ದಾರೆ.

ಈ ವೇಳೆ ಬ್ಯಾಂಕ್ ಶಾಖೆಯ ಲಾಕರ್ಗಳನ್ನು ತೆರೆಯಲು ಕಳ್ಳರು ವಿಫಲವಾದ ನಂತರ ಕಳ್ಳನೊಬ್ಬ ಭದ್ರತಾ ಕ್ರಮಗಳನ್ನು ಶ್ಲಾಘಿಸಿ ನೋಟ್ ಬರೆದಿಟ್ಟು ತೆರಳಿದ್ದಾನೆ.

ಕಳ್ಳರು ಮೊದಲು ಕ್ಯಾಷಿಯರ್ ಮತ್ತು ಗುಮಾಸ್ತರ ಕ್ಯಾಬಿನ್ಗಳನ್ನು ಹುಡುಕಾಡಿದ್ದು, ಈ ವೇಳೆ ಅವರಿಗೆ ಯಾವುದೇ ಕರೆನ್ಸಿ ಅಥವಾ ಬೆಲೆಬಾಳುವ ವಸ್ತುಗಳು ಕಂಡುಬಂದಿಲ್ಲ. ಹೀಗಾಗಿ ಕಳ್ಳರು ಬ್ಯಾಂಕ್ ನ ಲಾಕರ್ ಒಡೆಯಲು ಮುಂದಾಗಿದ್ದಾರೆ.

ಆದರೆ ಸತತ ಪ್ರಯತ್ನಗಳ ಹೊರತಾಗಿಯೂ ಕಳ್ಳರು ಲಾಕರ್ ತೆರೆಯುವಲ್ಲಿ ವಿಫಲಾದರು. ಹೀಗಾಗಿ ದರೋಡೆ ಪ್ರಯತ್ನ ವಿಫಲವಾದ ಬಳಿಕ ಬ್ಯಾಂಕ್ ಭದ್ರತಾ ಕ್ರಮಕ್ಕೆ ಸುಸ್ತಾದ ಕಳ್ಳರು ಅಲ್ಲಿಯೇ ಇದ್ದ ಒಂದು ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ತೆಲುಗಿನಲ್ಲಿ, “ನನಗೆ ಇಲ್ಲಿ ಒಂದು ರೂಪಾಯಿ ಸಿಗಲಿಲ್ಲ, ಹಾಗಾಗಿ ನನ್ನನ್ನು ಹಿಡಿಯಬೇಡಿ. ನನ್ನ ಬೆರಳಚ್ಚುಗಳು ಇರುವುದಿಲ್ಲ. ಉತ್ತಮ ಬ್ಯಾಂಕ್ ಎಂದು ಬರೆದಿಟ್ಟಿದ್ದಾನೆ.

ಶುಕ್ರವಾರ ದರೋಡೆ ಯತ್ನವನ್ನು ಗಮನಿಸಿದ ಬ್ಯಾಂಕ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ ಮತ್ತು ಅದರ ಆಧಾರದ ಮೇಲೆ ಸಂಬಂಧಿತ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಟಾಪ್ ನ್ಯೂಸ್