ಶಾಸಕ ತನ್ವೀರ್ ಸೇಠ್ ಚುನಾವಣಾ ನಿವೃತ್ತಿ ವಿಚಾರದಲ್ಲಿ ಹೈಡ್ರಾಮ; ಇಬ್ಬರು ಅಭಿಮಾನಿಗಳಿಂದ ಆತ್ಮಹತ್ಯೆಗೆ ಯತ್ನ,

ಮೈಸೂರು; ಶಾಸಕ ತನ್ವೀರ್ ಸೇಠ್ ಚುನವಣಾ ರಾಜಕೀಯದಿಂದ ನಿವೃತ್ತಿ ಬಯಸಿ ಎಐಸಿಸಿಗೆ ಪತ್ರ ಬರೆದಿದ್ದಾರೆ ಎಂಬ ಸುದ್ದಿಯೊಂದು ಬಹಿರಂಗವಾದ ಬೆನ್ನಲ್ಲೇ
ಮೈಸೂರಿನ ಎನ್.ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್
ಮನೆಯ ಮುಂದೆ ಅಭಿಮಾನಿಗಳು ನೆರೆದಿದ್ದು, ಈ ವೇಳೆ ಹೈಡ್ರಾಮವೇ ನಡೆದಿದೆ.

ಅನಾರೋಗ್ಯದ ಕಾರಣ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನಗೆ ಈ ಬಾರಿ ಟಿಕೆಟ್ ಬೇಡ. ನಾನು ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಲ್ಲ.
ನನ್ನ ಮೇಲೆ ಹಲ್ಲೆಯಾದ ಬಳಿಕ ಆರೋಗ್ಯ ತುಂಬಾ ಏರುಪೇರಾಗಿದೆ. ಮೊದಲಿನಂತೆ ನಾನು ಮಾನಸಿಕ ಹಾಗೂ ದೈಹಿಕವಾಗಿಯೂ ಶಕ್ತಿಯುತವಾಗಿಲ್ಲ. ಹೀಗಾಗಿ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಆದರೆ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.

ತನ್ವೀರ್ ಸೇಠ್ ನಿವೃತ್ತಿ ವಿಷಯ ತಿಳಿಯುತ್ತಿದ್ದಂತೆ ನೂರಾರು ಕಾರ್ಯಕರ್ತರು ಮನೆ ಮುಂದೆ ಜಮಾಯಿಸಿ ನಿವೃತ್ತಿ ನಿರ್ಧಾರ ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.

ಈ ವೇಳೆ ರಸೂಲ್ ಎಂಬ ಅಭಿಮಾನಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಪೊಲೀಸರು ಹಾಗೂ ಇತರೆ ಕಾರ್ಯಕರ್ತರು ಅವರನ್ನು ರಕ್ಷಣೆ ಮಾಡಿದ್ದಾರೆ.

ಇದಲ್ಲದೆ ತನ್ವೀರ್ ಮನೆ ಮೇಲೆ ಹತ್ತಿ ಅಜಿತ್ ಸೇಠ್ ಬ್ಲಾಕ್ ಅಧ್ಯಕ್ಷ ಸೈಯದ್ ಇಕ್ಬಾಲ್ ‌ಆತ್ಮಹತ್ಯೆ ಯತ್ನಿಸಿರುವ ಬಗ್ಗೆ ಕೂಡ ವರದಿಯಾಗಿದೆ.

ಟಾಪ್ ನ್ಯೂಸ್

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದ ಆಟೋ ಚಾಲಕ; ಕೃತ್ಯವನ್ನು ಕಂಡು ಪೊಲೀಸರಿಗೆ‌ ಮಾಹಿತಿ ನೀಡಿದ ವಿದ್ಯಾರ್ಥಿನಿಯರು

ಲೇಡಿಸ್ ಹಾಸ್ಟೆಲ್ ಬಳಿ ತೆರಳಿ ಖಾಸಗಿ ಅಂಗ ಪ್ರದರ್ಶಿಸಿದ ಆಟೋ ಚಾಲಕ; ಕೃತ್ಯವನ್ನು

ಮುಸ್ಲಿಮರ ವಿವಾಹ ನೋಂದಣಿಗೆ ವಕ್ಫ್ ಮಂಡಳಿಗೆ ಅನುಮತಿ ನೀಡಿದ ರಾಜ್ಯ ಸರಕಾರ; ವಿವಾಹ ಸರ್ಟಿಫಿಕೇಟ್ ಪಡೆಯಲು ನೀವು ಏನು ಮಾಡಬೇಕು? ಇಲ್ಲಿದೆ ಮಾಹಿತಿ…

ಮಂಗಳೂರು;ಮುಸ್ಲಿಮ್ ಜೋಡಿಯ ವಿವಾಹ ನೋಂದಣಿ ಮಾಡಲು ರಾಜ್ಯ ವಕ್ಫ್ ಮಂಡಳಿಗೆ ರಾಜ್ಯ ಸರ್ಕಾರ

Developed by eAppsi.com