ಕುಟುಂಬಸ್ಥರಿಗೆ ಹಣದ ಆಮಿಷವೊಡ್ಡಿ ಬಾಲಕಿಯನ್ನು ವಿವಾಹವಾದ 42 ವರ್ಷದ ವ್ಯಕ್ತಿ; 8 ಮಂದಿ ವಿರುದ್ಧ ಪ್ರಕರಣ ದಾಖಲು

ಕುಟುಂಬಸ್ಥರಿಗೆ ಹಣದ ಆಮಿಷವೊಡ್ಡಿ ಬಾಲಕಿಯನ್ನು ವಿವಾಹವಾದ 42 ವರ್ಷದ ವ್ಯಕ್ತಿ; 8 ಮಂದಿ ವಿರುದ್ಧ ಪ್ರಕರಣ ದಾಖಲು

ಮಹಾರಾಷ್ಟ್ರ; ಹಣದ ಆಮಿಷವೊಡ್ಡಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾದ 42 ವರ್ಷದ ವ್ಯಕ್ತಿ ಸೇರಿದಂತೆ 8 ಮಂದಿಯ ವಿರುದ್ಧ ಕಪುರಬಾವಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿಯು ಬಡ ಕುಟುಂಬದವಳಾಗಿದ್ದು, ಮದುವೆಗೆ 42ರ ವ್ಯಕ್ತಿಯೇ ಪೋಷಕರಿಗೆ ಚಿನ್ನ, ಹಣ ನೀಡುವುದಾಗಿ ಹೇಳಿದ್ದ.
ಬಾಲಕಿಯ ಪೋಷಕರು ಮದುವೆಗೆ ಒಪ್ಪಿಗೆ ನೀಡಿದ್ದರೂ, ಬಾಲಕಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು.

ಬಾಲಕಿಯ ತಾಯಿ ನಿಧನಳಾಗಿದ್ದು, ಬಾಲಕಿ ತನ್ನ ಕುಟುಂಬದೊಂದಿಗೆ ಥಾಣೆಯ ದಾದ್ಲಾನಿ ಪ್ರದೇಶದ ಬಾಲ್ಕೂಮ್‌ನಲ್ಲಿ ವಾಸಿಸುತ್ತಿದ್ದಳು.

42ರ ವ್ಯಕ್ತಿ ಬಾಲಕಿಯ ತಂದೆಗೆ ಹಣವನ್ನು ನೀಡಿ ಮದುವೆಯ ನಿಶ್ಚಿತಾರ್ಥದ ನಂತರ ಆಗಸ್ಟ್ 22 ರಂದು ಮದುವೆಯ ದಿನಾಂಕವನ್ನು ನಿಗದಿಪಡಿಸಿದ್ದಾನೆ. ಆದರೆ ಬಾಲಕಿ ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಿದ್ದಳು.

ಬಳಿಕ ಬಾಲಕಿ ತನಗೆ ಮದುವೆ ಇಷ್ಟವಿಲ್ಲ ತನ್ನನ್ನು ರಕ್ಷಿಸಿ ಎಂದು ಹೇಳಿದ್ದಾಳೆ. ಆದರೆ ಮರುದಿನ ಬೆಳಿಗ್ಗೆ
ಬಾಲಕಿಗೆ ದದ್ಲಾನಿಯ ಬಾಲ್ಕಮ್‌ನಲ್ಲಿ ಮದುವೆ ಮಾಡಲಾಗಿದೆ.ಈ ಸಂದರ್ಭದಲ್ಲಿ ಬಾಲಕಿಯ ತಂದೆ ಮತ್ತು ಇತರ ಸಂಬಂಧಿಕರು ಹಾಗೂ ವರನ ಸಹೋದರ ಉಪಸ್ಥಿತರಿದ್ದು, ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಧ್ಯಪ್ರವೇಶಿಸಿ ಅಲ್ಲಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ಮದುವೆಗೆ ಸಂಬಂಧಿಸಿದಂತೆ ಬಾಲಕಿ ನೀಡಿದ ದೂರಿನ ಮೇರೆಗೆ ಆಕೆಯ ತಂದೆ, ಚಿಕ್ಕಮ್ಮ ಮತ್ತು ಇತರ ಸಂಬಂಧಿಕರು ಮತ್ತು ಮಧುಮಗ, ಆತನ ಸಹೋದರ ಸೇರಿದಂತೆ ಒಟ್ಟು ಎಂಟು ಜನರ ವಿರುದ್ಧ ಕಪುರಬಾವಾಡಿ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ