ತಮಿಳುನಾಡು; ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಜೋಡಿಯ ಬರ್ಬರ ಹತ್ಯೆ

ಕುಟುಂಬದ ವಿರೋಧದ ನಡುವೆ ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಜೋಡಿಯನ್ನು ಭೀಕರವಾಗಿ ಹತ್ಯೆಗೈದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಮಾರಿ ಸೆಲ್ವಂ(24),ಕಾರ್ತಿಕಾ(20)ಹತ್ಯೆಯಾದ ದಂಪತಿ.

ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಸೆಲ್ವಂ ಹಾಗೂ ಕಾರ್ತಿಕಾ
ಮನೆಯವರ ವಿರೋಧದ ನಡುವೆ ಅ.31ರಂದು ಓಡಿಹೋಗಿ ಮದುವೆಯಾಗಿದ್ದರು.ಮದುವೆಯ ಬಳಿಕ ನವದಂಪತಿ ಮುರುಗೇಶನ್ ನಗರದಲ್ಲಿ ವಾಸಿಸುತ್ತಿದ್ದರು. ಮದುವೆಯಾಗಿ ಮೂರು ದಿನಗಳು ಕಳೆದಿದೆ. ಗುರುವಾರ ಸಂಜೆ 6 ಮಂದಿಯ ಗುಂಪೊಂದು ಬೈಕ್‌ನಲ್ಲಿ ಬಂದು ದಂಪತಿಯಿದ್ದ ಮನೆಗೆ ನುಗ್ಗಿ ಹಲ್ಲೆಗೈದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ತೂತುಕುಡಿ ಪೊಲೀಸರು, ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ಟಾಪ್ ನ್ಯೂಸ್