ವೇಗವಾಗ ಬರುತ್ತಿದ್ದ ಬಸ್ ಮುಂದುಗಡೆ ಹೋದ ಮಹಿಳೆ ಬಸ್ ಢಿಕ್ಕಿ ಹೊಡೆದು ಸಾವು; ಮಗನ ಫೀಸ್ ಕಟ್ಟಲು ಹಣಕ್ಕಾಗಿ ಅಪಘಾತಕ್ಕೀಡಾಗಲು ಯತ್ನಿಸಿ ಮಹಿಳೆ ಸಾವು?

ವೇಗವಾಗ ಬರುತ್ತಿದ್ದ ಬಸ್ ಮುಂದುಗಡೆ ಹೋದ ಮಹಿಳೆ ಬಸ್ ಢಿಕ್ಕಿ ಹೊಡೆದು ಸಾವು; ಮಗನ ಫೀಸ್ ಕಟ್ಟಲು ಹಣಕ್ಕಾಗಿ ಅಪಘಾತಕ್ಕೀಡಾಗಲು ಯತ್ನಿಸಿ ಮಹಿಳೆ ಸಾವು?

ತಮಿಳುನಾಡು;ವೇಗವಾಗಿ ಬರುತ್ತಿದ್ದ ಬಸ್​​ಗೆ ತಾನೇ ಹೋಗಿ ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದಾರೆ.ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.

ಆದರೆ ಅಪಘಾತದ ಬಳಿಕ ಆಯಕ್ಸಿಡೆಂಟ್​ ಆದರೆ ಸರ್ಕಾರದಿಂದ ಪರಿಹಾರದ ರೂಪದಲ್ಲಿ ಹಣ ಬರುತ್ತದೆ. ಅದರಲ್ಲಿ ಮಗನ ಶಾಲೆ ಫೀಸ್​ ಕಟ್ಟಬಹುದು ಎಂದು ಭಾವಿಸಿ ಮಹಿಳೆ ಉದ್ದೇಶ ಪೂರ್ವಕವಾಗಿ ತನ್ನ ಪ್ರಾಣವನ್ನು ತೆಗೆದಿದ್ದಾರೆ ಎಂದು ವರದಿಯಾಗಿದೆ.ಆದರೆ ಇದರ ಸತ್ಯಾಸತ್ಯತೆ ಬಯಲಾಗಬೇಕಿದೆ.ವೈರಲ್ ವಿಡಿಯೋ ಕೂಡ ಇದಕ್ಕೆ ಪುಷ್ಟಿ ನೀಡುವಂತಿದೆ.

ತಮಿಳುನಾಡಿನ ಸೇಲಂನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ ಪಾಪತಿ (45) ಮೃತರು.

ಪಾಪಾತಿ ಕಳೆದ 15 ವರ್ಷಗಳಿಂದಲೂ ಗಂಡನಿಂದ ದೂರವಿದ್ದರು.ಒಂಟಿಯಾಗಿ ಮಕ್ಕಳನ್ನು ನೋಡಿಕೊಂಡಿದ್ದಳು. ಮಗನ ಶಾಲೆಯ ಫೀಸ್​ ಕಟ್ಟಲು ಅವರ ಬಳಿ ಸಾಕಷ್ಟು ಹಣ ಇರಲಿಲ್ಲ.ಮಗ ಚೆನ್ನಾಗಿ ಓದಲಿ ಎಂಬ ಕಾರಣಕ್ಕೆ ಹಣ ಹೊಂದಿಸಲು ಪರದಾಡುತ್ತಿದ್ದರು ಎನ್ನಲಾಗಿದೆ.

ಜೂನ್​ 28ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.ಇದೀಗ ಭಾರೀ ವೈರಲ್ ಆಗುತ್ತಿದೆ.

ಟಾಪ್ ನ್ಯೂಸ್