ಶಾಲೆ ಬಿಟ್ಟು ಬರುತ್ತಿದ್ದ ಬಾಲಕಿ ಮೇಲೆ ದಾಳಿ ಮಾಡಿದ ಹಸು, ಬಾಲಕಿ ಗಂಭೀರ; ಭಯಾನಕ ಘಟನೆಯ ವಿಡಿಯೋ ವೈರಲ್..

ಶಾಲೆ ಬಿಟ್ಟು ಬರುತ್ತಿದ್ದ ಬಾಲಕಿ ಮೇಲೆ ದಾಳಿ ಮಾಡಿದ ಹಸು;ಭಯಾನಕ ಘಟನೆಯ ವಿಡಿಯೋ ವೈರಲ್

ತಮಿಳುನಾಡು;9 ವರ್ಷದ ಬಾಲಕಿಯೊಬ್ಬಳ ಮೇಲೆ ಹಸುವೊಂದು ಕ್ರರವಾಗಿ ದಾಳಿ ನಡೆಸಿದ್ದು ಈ ಕುರಿತ ಭಯಾನಕ ವಿಡಿಯೋ ವೈರಲ್ ಆಗಿದೆ.

ಬಾಲಕಿಯು ತಾಯಿಯ ಜೊತೆ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಹಸು ದಾಳಿ ಮಾಡಿದೆ.
ಆಯೇಷಾ ಎಂಬ ಬಾಲಕಿಯು ತಾಯಿ ಜತೆ ಮನೆಗೆ ನೆಡೆದುಕೊಂಡು ಹೋಗುತ್ತಿದ್ದಳು.ಇದೇ ವೇಳೆ ಹಸು ಆಯೇಷಾ ಮೇಲೆ ದಾಳಿ ನಡೆಸಿದೆ.

ಚೆನ್ನೈನ ಎಂಎಂಡಿಎ ಕಾಲೊನಿಯ ಆರ್‌ ಬ್ಲಾಕ್‌ನಲ್ಲಿ ಆಗಸ್ಟ್‌ 9ರಂದು ಘಟನೆ ನಡೆದಿದೆ. ಮೊದಲು ಹಸು ಕೋಡುಗಳಿಂದ ಬಾಲಕಿಗೆ ತಿವಿದೆ.ನಂತರ ಬಾಲಕಿ ಕೆಳಗೆ ಬಿದ್ದ ಮೇಲೆ ಡಿಕ್ಕಿ ಹೊಡೆದಿದೆ.ಮನಸ್ಸು ಬಂದ ಹಾಗೆ ಆಕೆಯನ್ನು ತುಳಿದು ಹಾಕಿದೆ. ಮಗಳ ಮೇಲೆ ಹಸು ದಾಳಿ ಮಾಡಿದ್ದನ್ನು ಕಂಡ ತಾಯಿಯು ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ಹಸು ದಾಳಿಗೆ ತುತ್ತಾದ ಬಾಲಕಿಯನ್ನು ರಕ್ಷಿಸಲು ಹಲವು ಜನ ಪ್ರಯತ್ನಿಸಿದ್ದಾರೆ.ಹಸುವನ್ನು ಬೆದರಿಸಿ ಹಿಂದಕ್ಕೆ ಕಳುಹಿಸಲು ಕಲ್ಲೇಟು ಕೊಟ್ಟಿದ್ದಾರೆ.ಇಷ್ಟಾದರೂ ಹಸು ಬಾಲಕಿಯನ್ನು ಬಿಟ್ಟಿಲ್ಲ.ಮೂರ್ನಾಲ್ಕು ಜನ ಹಸುವನ್ನು ಹಿಮ್ಮೆಟ್ಟಿಸಲು ಯತ್ನಿಸಿದರೂ, ಅವರ ಮೇಲೆಯೇ ಹಸು ದಾಳಿ ಮಾಡಿ ಬಳಿಕ ಹೇಗಾದರೂ ಮಾಡಿ ಹಸುವಿನಿಂದ ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಕುರಿತ ವಿಡಿಯೋ ವೈರಲ್ ಆಗಿದೆ.ಹಸುವನ್ನು ನಿರ್ಲಕ್ಷದಿಂದ ಬಿಟ್ಟ ಮಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಮೀಲಾದ್ ರ್ಯಾಲಿಯಲ್ಲಿ ತೆರಳುತ್ತಿದ್ದ ಯುವಕರು

ಕಾಪು;ಮೀಲಾದ್ ರ್ಯಾಲಿಯಲ್ಲಿ ಸಾಗುತ್ತಿದ್ದ ಯುವಕರ ಗುಂಪು ಅಪಘಾತದ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ

ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆ; ಭುಗಿಲೆದ್ದ ಭಾರೀ ಪ್ರತಿಭಟನೆ, ಇಂಟರ್ನೆಟ್ ಸ್ಥಗಿತ