ಉಳ್ಳಾಲ:ತಲಪಾಡಿ ಗ್ರಾ.ಪಂಗೆ ನೂತನ ಅಧ್ಯಕ್ಷರಾಗಿ ಎಸ್ ಡಿಪಿಐ ಬೆಂಬಲಿತ ಅಧ್ಯಕ್ಷ ಟಿ.ಇಸ್ಮಾಯಿಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು,ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಬೆಂಬಲಿತರು ಎಸ್ ಡಿಪಿಐ ಬೆಂಬಲಿತರಿಗೆ ಬೆಂಬಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ನಿರೀಕ್ಷೆಯಲ್ಲಿದ್ದ ಸತ್ಯರಾಜ್ ಗೆ ಸೋಲು ಉಂಟಾಗಿದೆ.
ಒಟ್ಟು 24 ವಾರ್ಡುಗಳ ಸದಸ್ಯರ ಪೈಕಿ 13 ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ, 1 ಕಾಂಗ್ರೆಸ್ ಹಾಗೂ 10 ಎಸ್ ಡಿಪಿಐ ಬೆಂಬಲಿತರು ಸದಸ್ಯರಾಗಿದ್ದರು.
ಆದರೆ ಇಂದು ನಡೆದ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ವೈಭವ್ ವೈ. ಶೆಟ್ಟಿ ಮತ್ತು ಎಸ್ ಡಿಪಿಐ ಬೆಂಬಲಿತ ಹಬೀಬಾ ಡಿ.ಬಿ ಗೈರಾಗಿದ್ದರು.ಟಿ ಇಸ್ಮಾಯಿಲ್ ಮತ್ತು ಸತ್ಯರಾಜ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆದಿದ್ದು, ಇಬ್ಬರು ಸಮಬಲ ಮತವನ್ನು ಆರಂಭದ ಹಂತದಲ್ಲಿ ಪಡೆದುಕೊಂಡಿದ್ದರು.ನಂತರ ಚುನಾವಣಾಧಿಕಾರಿಗಳ ಆದೇಶದಂತೆ ಚೀಟಿ ಎತ್ತುವ ಪ್ರಕ್ರಿಯೆಯಲ್ಲಿ ಟಿ.ಇಸ್ಮಾಯಿಲ್ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಬಲಿತರ ಸಂಖ್ಯೆ ಹೆಚ್ಚಿದ್ದರೂ ಅಲ್ಲಿದ್ದ ಇಬ್ಬರು ಎಸ್ ಡಿಪಿಐ ಬೆಂಬಲಿತರಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಸಮಬಲ ಬಂದಿದೆ.