ಕೌಟುಂಬಿಕ ಕಲಹ; ಜಗಳ ಬಿಡಿಸಲು ಹೋದ ಮೈದುನನ ಚೂರಿಯಿಂದ ಇರಿದು ಕೊಲೆ

ಕೋಲಾರ:ಪತ್ನಿಯ ಜೊತೆ ಜಗಳ ಮಾಡುತ್ತಿದ್ದವನನ್ನು ಬಿಡಿಸಲು ಹೋದ ಸಂಬಂಧಿಯನ್ನೇ ವ್ಯಕ್ತಿಯೋರ್ವ ಕೊಲೆ ಮಾಡಿರುವ ಘಟನೆ ನಗರದ ಬಂಬುಬಜಾರ್​ನಲ್ಲಿ ನಡೆದಿದೆ.

ಫಯಾಜ್​ ಎಂಬುವನು ತನ್ನ ಪತ್ನಿಯ ತಂಗಿಯ ಗಂಡ ತಾಜ್ ನನ್ನು ಕೊಲೆ ಮಾಡಿದ್ದಾನೆ.

ಫಯಾಝ್ ಎನ್ನುವಾತ ಪತ್ನಿ ಜೊತೆ ದಿನಾ ಗಲಾಟೆ ಮಾಡುತ್ತಿದ್ದರು.ಇದನ್ನು ಸಂಬಂಧಿಯಾದ ತಾಜ್ ಪ್ರಶ್ನೆ ಮಾಡಿದ್ದಾನೆ.ಈ ವೇಳೆ ತಾಜ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಮತ್ತೋರ್ವ ಸಂಬಂಧಿಯ ಮೇಲೂ ಕೊಲೆ ಯತ್ನ ನಡೆಸಿದ್ದಾನೆ.

ಇದೀಗ ಆರೋಪಿ ಫಯಾಝ್ ನನ್ನು ಗಲ್​ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಫಯಾಝ್ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದರಿಂದ ಮೂರು ತಿಂಗಳ ಹಿಂದೆ​ ಪತ್ನಿ ತಜ್ಜೂನ್ನೀಸಾ ತವರು ಮನೆಗೆ ಬಂದಿದ್ದಳು.ಮಾ.19ರಂದು ಪಯಾಝ್ ಮನೆಗೆ ಮಾತನಾಡಿಸಲು ತೆರಳಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ.

ತಾಜ್​ ಹಾಗೂ ಜಪ್ರುಲ್ಲಾ ಗಲಾಟೆ ಬಿಡಿಸಲು ಹೋಗಿದ್ದಾರೆ ಈ ವೇಳೆ ಫಯಾಜ್​ ಏಕಾಏಕಿ ತಾಜ್​ಗೆ ಚಾಕುವಿನಿಂದ ಇರಿದಿದ್ದಾನೆ. ತಾಜ್​ ಸ್ಥಳದಲ್ಲೇ ಮೃತಪಟ್ಟರೆ, ಜೊತೆಗಿದ್ದ ಜಪ್ರುಲ್ಲಗೆ ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಟಾಪ್ ನ್ಯೂಸ್

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆ; ಮಕ್ಕಳು ಆಟವಾಡುವಾಗ ಆಕಸ್ಮಿಕವಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ

ನವದೆಹಲಿ; ಮರದ ಪೆಟ್ಟಿಗೆಯಲ್ಲಿ ಇಬ್ಬರು ಮಕ್ಕಳ ಮೃತದೇಹ ಪತ್ತೆಯಾಗಿರುವ ಶಾಕಿಂಗ್ ಘಟನೆ ರಾಷ್ಟ್ರ

Developed by eAppsi.com