ತಬ್ರೇಝ್ ಅನ್ಸಾರಿ ಗುಂಪು ಹತ್ಯೆ ಪ್ರಕರಣ;11 ಆರೋಪಿಗಳು ದೋಷಿ- ತೀರ್ಪು

ಜಾರ್ಖಂಡ್; ದೇಶದಾದ್ಯಂತ ಭಾರೀ ಸುದ್ದಿಯಾಗಿದ್ದ ತಬ್ರೇಝ್ ಅನ್ಸಾರಿ ಗುಂಪು ಹತ್ಯೆ ಪ್ರಕರಣದ 13 ಆರೋಪಿಗಳ ಪೈಕಿ 11 ಜನರನ್ನು ದೋಷಿಗಳು ಎಂದು ಘೋಷಿಸಿದೆ.

ಸರಾಯ್‌ಕೇಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು
ಸಾಕ್ಷಾಧಾರಗಳ ಕೊರತೆಯಿಂದ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ಈ ಕುರಿತು ನ್ಯಾಯಾಲಯವು ಜು.5ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

ಆರೋಪಿಗಳ ಪೈಕಿ ಕುಶಲ ಮಹ್ಲಿ ಎಂಬಾತ ವಿಚಾರಣೆಯ ಅವಧಿಯಲ್ಲಿ ಮೃತಪಟ್ಟಿದ್ದಾನೆ.

ಪ್ರಾಸಿಕ್ಯೂಷನ್ ಪರ ವಕೀಲ ಅಲ್ತಾಫ್ ಹುಸೇನ್ ಅವರು ಎಲ್ಲ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುಂಪು ಥಳಿತ ಹತ್ಯೆ ಪ್ರಕರಣದಲ್ಲಿ ಎಲ್ಲ 13 ಆರೋಪಿಗಳ ವಿರುದ್ಧ ನರಹತ್ಯೆ ಪ್ರಕರಣ ದಾಖಲಿಸಿದ್ದರು.

2019,ಜೂ.18ರಂದು ಸರಾಯ್ಕೇಲಾ-ಖರ್ಸ್ವಾನ್ ಜಿಲ್ಲೆಯ ಧಕ್ತಿದಿ ಗ್ರಾಮದಲ್ಲಿ ಬೈಕ್ ಕಳ್ಳತನದ ಶಂಕೆಯಲ್ಲಿ ಗುಂಪು ಅನ್ಸಾರಿ (24) ಕಂಬಕ್ಕೆ ಕಟ್ಟಿ ಹಾಕಿ ಗಂಟೆಗಳ ಕಾಲ ಥಳಿಸಿತ್ತು ಹಾಗೂ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುವಂತೆ ಬಲವಂತ ಮಾಡಿತ್ತು.

ಟಾಪ್ ನ್ಯೂಸ್