ಉಮ್ರಾ ಯಾತ್ರೆಗೆ ತೆರಳಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ರಂಜಾನ್ ವೇಳೆ
ಉಮ್ರಾ ನಿರ್ವಹಿಸಲು ಕುಟುಂಬ ಸಮೇತ ಮದೀನಾಕ್ಕೆ ತೆರಳಿದ್ದಾರೆ.

ಮಂಗಳವಾರ ಇನ್ಸ್ಟಾಗ್ರಾಮ್ನಲ್ಲಿ ಹಲವಾರು ಫೋಟೋಗಳನ್ನು ಸಾನಿಯಾ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರ ಪೋಷಕರು, ಇಮ್ರಾನ್ ಮಿರ್ಜಾ ಮತ್ತು ನಸಿಮಾ ಮಿರ್ಜಾ, ಅವರ ಸಹೋದರಿ ಅನಮ್ ಮಿರ್ಜಾ, ಅವರ ಸೋದರ ಮಾವ ಮೊಹಮ್ಮದ್ ಅಸಾದುದ್ದೀನ್ ಮತ್ತು ಅವರ ಮಗ ಇಜಾನ್ ಮಿರ್ಜಾ ಮಲಿಕ್ ಸೇರಿದ್ದಾರೆ.

ಫೋಟೋಗೆ ಸಾನಿಯಾ ಹೀಗೆ ಶೀರ್ಷಿಕೆ ನೀಡಿದ್ದಾರೆ; ಅಲ್ಹಮ್ದುಲಿಲ್ಲಾ, ಅಲ್ಲಾಹನು ನಮ್ಮ ಪ್ರಾರ್ಥನೆಯನ್ನು ಸ್ವೀಕರಿಸಲಿ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಇರ್ಫಾನ್ ಪಠಾಣ್, “ಆಮೀನ್” ಎಂದು ಬರೆದಿದ್ದಾರೆ.ಹುಮಾ ಖುರೇಷಿ ಕಾಮೆಂಟ್‌’ಗಳ ವಿಭಾಗದಲ್ಲಿ ಹಲವಾರು ಹೃದಯದ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ರಕ್ಷಾಂದಾ ಖಾನ್ “ಅಲ್ಲಾ ನಿಮ್ಮ ಎಲ್ಲಾ ಪ್ರಾರ್ಥನೆಗಳನ್ನು ಸ್ವೀಕರಿಸಲಿ” ಎಂದು ಹೇಳಿದ್ದಾರೆ.

ಅನೇಕ ಮಂದಿ ಸಾನಿಯಾ ಅವರ ಪತಿ-ಕ್ರಿಕೆಟರ್ ಶೋಯೆಬ್ ಮಲಿಕ್ ಬಗ್ಗೆ ಕೇಳಿದ್ದಾರೆ. ಸಾನಿಯಾ ಪತಿ ಎಲ್ಲಿದ್ದಾರೆ? ಡಿವೋರ್ಸ್ ಕನ್ಫರ್ಮ್ ಎಂದೆಲ್ಲಾ ಬರೆದಿದ್ದಾರೆ.

ಕಳೆದ ವರ್ಷ ಸಾನಿಯಾ ಮತ್ತು ಶೋಯೆಬ್ ವಿಚ್ಛೇದನದ ಬಗ್ಗೆ ಹಲವಾರು ವದಂತಿಗಳು ಇಂಟರ್ನೆಟ್ನಲ್ಲಿ ಹರಿದಾಡಿತ್ತು. ಶೋಯೆಬ್ ಮತ್ತು ಸಾನಿಯಾ ತಮ್ಮ 12 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ ಎಂದು ಹಲವು ವರದಿಗಳು ಹೇಳಿದ್ದವು.

ಟಾಪ್ ನ್ಯೂಸ್