ಫ್ಲೈಓವರ್ ಮೇಲಿನಿಂದ ನೋಟಿನ ರಾಶಿಯನ್ನು ಎಸೆದ ಯುವಕ ಪೊಲೀಸ್ ವಶಕ್ಕೆ; ನೋಟಿನ ರಾಶಿ ಎಸೆದ ಈತ ಯಾರು ಗೊತ್ತಾ?

ಬೆಂಗಳೂರು:ಬೆಳಗ್ಗೆ ಕೆ ಆರ್ ಮಾರ್ಕೆಟ್ ಫ್ಲೈಓವರ್ ಮೇಲಿನಿಂದ 10 ರೂ.‌ನೋಟಿನ ರಾಶಿಯನ್ನು ಎಸೆದ ಯುವಕನಿಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅರುಣ್ ಎಂಬಾತನಿಗೆ ಪೊಲೀಸರು ವಶಕ್ಕೆ ಪಡೆದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಆತ ದುಡ್ಡು ಯಾಕೆ ಎಸೆದೆ ಅನ್ನೋದನ್ನು ಮಾತ್ರ ಬಾಯಿಬಿಡಲಿಲ್ಲ.

ಒಂದು ಬ್ಯಾಗ್‌ನಲ್ಲಿ 10ರೂ. ನೋಟುಗಳನ್ನು ತಂದು ಆಕಾಶಕ್ಕೆ ಎಸೆದ ಆತನನ್ನು ಕೆಲವರು ಹಿಡಿದುಕೊಳ್ಳಲು ಪ್ರಯತ್ನಿಸಿದರಾದರೂ ಆತ ಸ್ಕೂಟರ್‌ ಏರಿ ತಪ್ಪಿಸಿಕೊಂಡಿದ್ದಾನೆ. ಆತ ಒಬ್ಬ ನಿರೂಪಕ, ಇವೆಂಟ್‌ ಮ್ಯಾನೇಜರ್‌ ಎಂದು ತಿಳಿದುಬಂದಿದೆ.

ಅರುಣ್‌ ಮೂಲತಃ ಸಾರ್ವಜನಿಕ ಕಾರ್ಯಕ್ರಮಗಳ ನಿರೂಪಕ. ಆತ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯನ್ನು ನಡೆಸುತ್ತಿದ್ದಾನೆ ಎನ್ನಲಾಗಿದೆ.

ಹಣ ಸುರಿಮಳೆಗೈದ ಕೇಸ್ ಗೆ ಸಂಬಂಧಿಸಿ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಟಾಪ್ ನ್ಯೂಸ್