ಉಳ್ಳಾಲದಲ್ಲಿ 10 ಮಂದಿಯ ಬಂಧನ
ಉಳ್ಳಾಲ:ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು 10 ಮಂದಿಯನ್ನು ಬಂಧಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಸಮೀಪದ ತಚ್ಚಣಿ ಎಂಬಲ್ಲಿ ನಡೆದಿದೆ.
ಮಂಜೇಶ್ವರ ನಿವಾಸಿ ಅಶ್ವತ್, ಸುಂಕದಕಟ್ಟೆ ನಿವಾಸಿ ಅಕ್ಬರ್, ಬೀರಿ ನಿವಾಸಿ ಅಬ್ಬಾಸ್, ಮಾಡೂರು ನಿವಾಸಿ ಅಮೀನ್, ಮಾರಿಪಳ್ಳ ನಿವಾಸಿ ಶಂಶೀರ್, ಅಡ್ಯಾರ್ ನಿವಾಸಿ ಅಶ್ವಿತ್, ಇಸ್ಮಾಯಿಲ್, ಬಜಾಲ್ ನಿವಾಸಿ ಹರೀಶ್ ಬಂಧಿತರು ಎಂದು ಗುರುತಿಸಲಾಗಿದೆ.ಬಂಧಿತರಿಂದ
ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಸಮೀಪದ ತಚ್ಚಣಿ ಎಂಬಲ್ಲಿ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೊಲೀಸರ ತಂಡ
10 ಮಂದಿಯನ್ನು ಬಂಧಿಸಿ, ಬಂಧಿತರಿಂದ ಎಂಟು ಬೈಕ್, ಒಂದು ರಿಕ್ಷಾ ಸಹಿತ 14,500 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ ಎಂದು ವರದಿಯಾಗಿದೆ.