ಕಾಲೇಜಿನಲ್ಲಿ ಚೆನ್ನಾಗಿ ಕಲಿಯುತ್ತಿಲ್ಲ ಎಂದು ಮಗನಿಗೆ ಹೊಡೆದ ತಂದೆ, 18 ವರ್ಷದ ಮಗ ಸಾವು; ಬೈಕ್ ಜೊತೆ ಮೃತದೇಹ ಕೊಂಡೊಯ್ದು ರಸ್ತೆಯಲ್ಲಿ ಎಸೆದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಪೋಷಕರು
ಛತ್ತೀಸ್ ಗಢ;ಮಗನನ್ನು ಕೊಂದು ಆತನ ಶವವನ್ನು ರಸ್ತೆ ಪಕ್ಕದಲ್ಲಿ ಎಸೆದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಪೋಷಕರನ್ನು ಪೊಲೀಸರು ಬಂಧಿಸಿದ ಘಟನೆ ಛತ್ತಿಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ನಡೆದಿದೆ.
ಲೈಲುಂಗಾ ಪೊಲೀಸ್ ಠಾಣಾ ವ್ಯಾಪ್ತಿಯ ಲೋಹದಪಾನಿ ಗ್ರಾಮದ ನಿವಾಸಿ ಕುಹ್ರು ಸಿಂಗರ್ ಅವರ ಪುತ್ರ ಟೆಕ್ಮಣಿ ಪೈಕಾರ ಅವರ ಮೃತದೇಹ ಲಾಕ್ರಾ ಟೋಕ್ರಿ ರಸ್ತೆಯಲ್ಲಿ ಪತ್ತೆಯಾಗಿದೆ.
ಬೈಕ್ ಅಪಘಾತವಾಗಿ ಟೆಕ್ಮಾಣಿ ಸಾವನ್ನಪ್ಪಿದ್ದಾರೆ ಎಂದು ಮೃತನ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದರು.
ಪ್ರಥಮ ಪಿಯುಸಿ ಓದುತ್ತಿದ್ದ ಟೆಕ್ಮಾಣಿ ಹಾಸ್ಟೆಲ್‌ನಿಂದ ಮನೆಗೆ ಬಂದು ಬೈಕಿನಲ್ಲಿ ವಾಪಾಸ್ಸು ಹಿಂದಿರುಗಿದ್ದಾನೆ. ಬಳಿಕ ತಮ್ಮ ಮನೆಯ ಸಮೀಪವಿರುವ ಲಾಕ್ರಾ ಟೋಕ್ರಿ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಮೃತನ ತಾಯಿ ಕರಮವತಿ ಪೈಕಾರ ಹೇಳಿಕೆ ನೀಡಿದ್ದರು.
ಮರಣೋತ್ತರ ಪರೀಕ್ಷೆಯು ಆತನ ದೇಹದಲ್ಲಿ ಗಂಭೀರವಾದ ಗಾಯಗಳನ್ನು ಬಹಿರಂಗಪಡಿಸಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.ಮೃತನ ಮನೆಯಲ್ಲಿ ತನಿಖೆ ನಡೆಸಿದಾಗ ಮನೆಯ ಅಲ್ಲಲ್ಲಿ ಹೊಸದಾಗಿ ಪೈಂಟ್‌ಗಳನ್ನು ಮಾಡಿಸಲಾಗಿತ್ತು.ಅಲ್ಲದೇ ಮನೆಯ ಅಂಗಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ.ಇದನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಇದು ಮನುಷ್ಯನ ರಕ್ತ ಎಂದು ದೃಢಪಟ್ಟಿದೆ.
ಈ ಕುರಿತು ಪೋಷಕರನ್ನು ವಿಚಾರಣೆಗೆ ಒಳಪಡಿಸಿದಾಗ ತಾವು ಮಾಡಿರುವ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಮಗನಿಗೆ ಕಲಿಕೆಯಲ್ಲಿ ಆಸಕ್ತಿ ಇಲ್ಲದೆ ಇದ್ದುದ್ದರಿಂದ ಹಾಸ್ಟೆಲ್‌ನಿಂದ ಮನೆಗೆ ಬಂದ ತಕ್ಷಣ ಆತನಿಗೆ ಹೊಡೆದಿದ್ದೇನೆ. ಇದರಿಂದ ಆತ ಮೃತಪಟ್ಟಿದ್ದಾನೆ. ಭಯದಿಂದ ಆತನ ಮೃತದೇಹ ಹಾಗೂ ಬೈಕನ್ನು ರಸ್ತೆ ಪಕ್ಕ ಇರಿಸಿ ಕೊಲೆಯನ್ನು
ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದೇವೆ ಎಂದು ಹೇಳಿದ್ದಾರೆ.
ಇದೀಗ ಟೆಕ್ಮಣಿಯ ಪೋಷಕರನ್ನು ಕೊಲೆ, ಸಾಕ್ಷ್ಯ ನಾಶಪಡಿಸುವಿಕೆ ಆರೋಪದಲ್ಲಿ ಬಂಧಿಸಲಾಗಿದೆ.