ಮೊದಲ ಏಕದಿನ ಪಂದ್ಯ: ವಿಂಡೀಸ್ ವಿರುದ್ಧ ಜಯ ಸಾಧಿಸಿದ ಟೀಂ ಇಂಡಿಯಾ!

ಬ್ರಿಡ್ಜ್ಟೌನ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡಿಯಾ ತಂಡ ಕೇವಲ 114 ರನ್ ಗಳಿಗೆ ಆಲೌಟ್ ಆಯಿತು.ಅಲ್ಪಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 5 ವಿಕೆಟ್ ಗಳ ಗೆಲುವು ಸಾಧಿಸಿದೆ.

ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಜೋಡಿ ಬ್ಯಾಟಿಂಗ್ ಆರಂಭಿಸಿದ್ದು 52 ರನ್ ಪೇರಿಸಿದ್ದರೆ, ಶುಭಮನ್ ಗಿಲ್ 7 ರನ್ ಗಳಿಸಿ ಔಟಾದರು. ನಂತರ ಬಂದ ಸೂರ್ಯಕುಮಾರ್ 19 ರನ್ ಗಳಿಸಿದ್ದರೆ ರವೀಂದ್ರ ಜಡೇಜಾ ಅಜೇಯ 16 ರನ್ ಬಾರಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ವೇಗಿ ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ವಿಂಡೀಸ್ ಪರ ಬ್ರಾನ್ಡೊನ್ ಕಿಂಗ್ 17, ಅಲಿಕ್ ಅಥಾನಾಜೆ 22, ಶಾಯ್ ಹೋಪ್ 43 ರನ್ ಗಳಿಸಿದ್ದಾರೆ. ಇನ್ನು ಭಾರತದ ಪರ ಬೌಲಿಂಗ್ ನಲ್ಲಿ ಕುಲದೀಪ್ ಯಾದವ್ 4, ರವೀಂದ್ರ ಜಡೇಜಾ 3, ಹಾರ್ದಿಕ್ ಪಾಂಡ್ಯ, ಮುಕೇಶ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದಿದ್ದಾರೆ. ಮೂರು ಪಂದ್ಯಗಳ ಏಕದಿನ ಪಂದ್ಯದಲ್ಲಿ ಭಾರತ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಟಾಪ್ ನ್ಯೂಸ್