ಕಾರ್ಯಕ್ರಮದಲ್ಲಿ ಭಾಷಣ ಮಾಡುವಾಗ ಇದ್ದಕ್ಕಿದ್ದಂತೆ ವೇದಿಕೆ ಕುಸಿತ; ಮಾಜಿ ಗೃಹಸಚಿವರು ಸೇರಿ 10 ಮಂದಿ ಅತಿಥಿಗಳಿಗೆ ಗಾಯ, ಘಟನೆಯ ವಿಡಿಯೋ ವೀಕ್ಷಿಸಿ…

ಆಂಧ್ರಪ್ರದೇಶ;ಕಾರ್ಯಕ್ರಮವೊಂದು ನಡೆಯುತ್ತಿದ್ದ ವೇಳೆ ವೇದಿಕೆ ಕುಸಿದು ಬಿದ್ದ ಪರಿಣಾಮ ಮಾಜಿ ಗೃಹ ಸಚಿವರು ಸೇರಿ ತೆಲುಗು ದೇಶಂ ಪಕ್ಷ (ಟಿಡಿಪಿ)ದ 10 ಮುಖಂಡರು ಗಾಯಗೊಂಡಿರುವ ಘಟನೆ ನಡೆದಿದೆ.

ಮಾಜಿ ಗೃಹ ಸಚಿವ ನಿಮ್ಮಕಾಯಲ ಚಿನ್ನರಾಜಪ್ಪ ಸೇರಿದಂತೆ ಪ್ರತಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) 10 ಮುಖಂಡರಿಗೆ ಸಾರ್ವಜನಿಕ ಸಭೆಗೆ ಹಾಕಲಾಗಿದ್ದ ವೇದಿಕೆ ಕುಸಿದು ಬಿದ್ದಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪಕ್ಷದ ವಕ್ತಾರರು ಶನಿವಾರ ತಿಳಿಸಿದ್ದಾರೆ.

ಏಲೂರು ಜಿಲ್ಲೆಯ ಬತ್ತುಲವಾರಿಗುಡೆಂ ಎಂಬಲ್ಲಿ ಪಕ್ಷದ ವತಿಯಿಂದ ‘ಭವಿಷ್ಯದ ಭರವಸೆ’ ಎಂಬ ಕಾರ್ಯಕ್ರಮ ನಡೆದಿದ್ದು,ಕಾರ್ಯಕ್ರಮ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಟಿಡಿಪಿ ನಾಯಕರು ಕುಳಿತಿದ್ದ ವೇದಿಕೆ ಕುಸಿದು ಬಿದ್ದಿದೆ.

ಆಕಸ್ಮಿಕವಾಗಿ ವೇದಿಕೆ ಕುಸಿದಿದೆ. ಮಾಜಿ ಗೃಹ ಸಚಿವ ಚಿನ್ನರಾಜಪ್ಪ ಮತ್ತು ಮಾಜಿ ಸಂಸದ ಮಾಗಂಟಿ ಬಾಬು ಸೇರಿ ಕೆಲವರಿಗೆ ಗಾಯಗಳಾಗಿವೆ ಎಂದು ಟಿಡಿಪಿ ವಕ್ತಾರರು ಮಾಹಿತಿ ನೀಡಿದ್ದಾರೆ.

ಒದ್ದೆ ಮಣ್ಣಿನ ಮೇಲೆ ವೇದಿಕೆಯನ್ನು ನಿರ್ಮಿಸಿದ ಕಾರಣ ಮತ್ತು ಜೋರಾದ ಗಾಳಿ ಬೀಸಿದ ಪರಿಣಾಮ ವೇದಿಕೆ ಕುಸಿದಿದೆ ಎನ್ನಲಾಗಿದೆ.

ಟಾಪ್ ನ್ಯೂಸ್