ಅಟ್ಲಾಂಟಿಕ್ ಸಮುದ್ರದಲ್ಲಿ 12,600 ಅಡಿ ಆಳದಲ್ಲಿರುವ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋದ ಐವರು ಕೋಟ್ಯಧಿಪತಿಗಳು ದುರಂತ ಅಂತ್ಯ ಕಂಡಿದ್ದಾರೆ.
ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ನಿರ್ವಹಿಸುವ ಟೈಟಾನ್ ಸಬ್‌ಮರ್ಸಿಬಲ್ ಅಟ್ಲಾಂಟಿಕ್ ಸಾಗರದಲ್ಲಿ ಸ್ಫೋಟಗೊಂಡಿದ್ದು, ಎಲ್ಲಾ ಐವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್ ಸಂಸ್ಥೆ ಅಟ್ಲಾಂಟಿಕ್ ಸಾಗರದ ತಳದಲ್ಲಿ ಮುಳುಗಿರುವ ಟೈಟಾನಿಕ್ ಹಡಗು ನೋಡಲು ಪ್ರಯಾಣವನ್ನು ಆಯೋಜಿಸುತ್ತದೆ. ಟೈಟಾನ್ ಸಬ್‌ಮರ್ಸಿಬಲ್ ಪ್ರಯಾಣಿಕರನ್ನು ಹೊತ್ತು ಸಮುದ್ರಕ್ಕೆ ಆಳಕ್ಕೆ ತೆರಳಿ, ಟೈಟಾನಿಕ್ ಹಡಗಿನ ಅವಶೇಷಗಳನ್ನು ತೋರಿಸಿ ವಾಪಸ್ ಕರೆತರುತ್ತದೆ. ಆದರೆ ಈ ಬಾರಿ ಹೋದವರು ದುರಂತ ಅಂತ್ಯ ಕಂಡಿದ್ದಾರೆ.ಪ್ರಯಾಣಕ್ಕೆ ಓರ್ವರಿಗೆ ಬರೊಬ್ಬರಿ 2 ಕೋಟಿ ವೆಚ್ಚ ವಿಧಿಸಲಾಗುತ್ತದೆ.
ಈ ಜಲಾಂತರ್ಗಾಮಿಯಲ್ಲಿ ಹೆಸರಾಂತ ಟೈಟಾನಿಕ್ ತಜ್ಞ, ವಿಶ್ವ ದಾಖಲೆ ಹೊಂದಿರುವ ಸಾಹಸಿ, ಪಾಕಿಸ್ತಾನದ ಶ್ರೀಮಂತ ಕುಟುಂಬದ ಇಬ್ಬರು ಸದಸ್ಯರು ಮತ್ತು ಕಂಪನಿಯ ಸಿಇಒ, ಈ ಐಷಾರಾಮಿ ಪ್ರಯಾಣದ ಭಾಗವಾಗಿದ್ದರು.
ಯುಎಸ್ ಕೋಸ್ಟ್ ಗಾರ್ಡ್ ಮತ್ತು ಕೆನಡಾ, ಯುಕೆ ಮತ್ತು ಫ್ರಾನ್ಸ್‌ನ ಆಳವಾದ ಸಮುದ್ರದ ನೀರಿನ ತಜ್ಞರು ಜಂಟಿಯಾಗಿ ಟೈಟಾನ್ ಸಬ್‌ಮರ್ಸಿಬಲ್‌ಗಾಗಿ ಭಾನುವಾರ ಜೂನ್ 18 ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಆದರೂ
ಐವರು ಪ್ರಯಾಣಿಕರನ್ನು ಉಳಿಸಲು ಸಾಧ್ಯವಾಗಿಲ್ಲ. ಉತ್ತರ ಅಟ್ಲಾಂಟಿಕ್‌ನಲ್ಲಿ ಸಮುದ್ರದ ಆಳದಲ್ಲಿ ಜಲಾಂತರ್ಗಾಮಿ ಸ್ಫೋಟಗೊಂಡಿದ್ದು ಯಾರೊಬ್ಬರೂ ಬದುಕುಳಿದಿಲ್ಲ ಎಂದು ಯುಎಸ್ ಕೋಸ್ಟ್ ಗಾರ್ಡ್ ಹೇಳಿದ್ದಾರೆ.
ಇನ್ನು ಸ್ಫೋಟಗೊಂಡಿರುವ ನೌಕೆಯಲ್ಲಿ ಪಾಕಿಸ್ತಾನದ ರಾಜಮನೆತನದ ಶ್ರೀಮಂತ ಉದ್ಯಮಿ ಮತ್ತು ಅವರ ಮಗ ಕೂಡ ಇದ್ದರು.ಪಾಕಿಸ್ತಾನದ ಖ್ಯಾತ ಉದ್ಯಮಿ ಶಹಜಾದಾ ದಾವೂದ್, ಕರಾಚಿಯ ಪ್ರಧಾನ ಕಚೇರಿಯ ಸಂಘಟಿತ ಎಂಗ್ರೋದ ಉಪಾಧ್ಯಕ್ಷರಾಗಿದ್ದರು. ಅವರ ಮಗ ಸುಲೇಮಾನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು ಮತ್ತು ಇಬ್ಬರೂ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದರು.
ಓಷನ್‌ಗೇಟ್ ಎಕ್ಸ್‌ಪೆಡಿಶನ್ಸ್‌ನ ಮುಖ್ಯ ಕಾರ್ಯನಿರ್ವಾಹಕ
ಸ್ಟಾಕ್‌ಟನ್ ರಶ್ ಇದ್ದರು.
25 ವರ್ಷಗಳ ಕಾಲ ಫ್ರೆಂಚ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ಪಾಲ್-ಹೆನ್ರಿ ನರ್ಜಿಯೊಲೆಟ್ ಮತ್ತು 58 ವರ್ಷದ ಹಮಿಶ್ ಹಾರ್ಡಿಂಗ್ ಇದ್ದರು.ಇವರು ಮೂರು ಗಿನ್ನೆಸ್ ವಿಶ್ವ ದಾಖಲೆಗಳೊಂದಿಗೆ ಬ್ರಿಟಿಷ್ ವಾಯುಯಾನ ಉದ್ಯಮಿಯಾಗಿದ್ದರು ಮತ್ತು ರೋಮಾಂಚಕ ಸಾಹಸಗಳ ಇತಿಹಾಸವನ್ನು ಹೊಂದಿದ್ದರು. ಒಂದು ವರ್ಷದ ಹಿಂದೆ, ಅವರು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ ಕಂಪನಿಯ ಮೂಲಕ ಬಾಹ್ಯಾಕಾಶ ಪ್ರವಾಸ ಮಾಡಿದ್ದರು.