ಸಿರಿಯಾ ಭೂಕಂಪ; ಕಟ್ಟಡದ ಅವಶೇಷಗಳಡಿ ಹೊಕ್ಕಳ ಬಳ್ಳಿ ಬೇರ್ಪಡದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶುವನ್ನು ದತ್ತು ಪಡೆಯಲು ಮುಗಿಬಿದ್ದ ಜನ!

ವಾಯುವ್ಯ ಸಿರಿಯಾದಲ್ಲಿ ಭೂಕಂಪನಕ್ಕೆ ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಮಗುವಿಗೆ ಜನ್ಮ‌ನೀಡಿ ತಾಯಿ ಮೃತಪಟ್ಟಿದ್ದಾರೆ.

ಸಿರಿಯಾದ ಜಿಂದಾಯ್ರಿಸ್ ಪಟ್ಟಣದಲ್ಲಿ ಕಾರ್ಯಾಚರಣೆ ವೇಳೆ ಕಟ್ಟಡದ ಅವಶೇಷಗಳಡಿಯಲ್ಲಿ ಈ ನವಜಾತ ಶಿಶು ಪತ್ತೆಯಾಗಿತ್ತು.ಆ ಮಗು ಪತ್ತೆಯಾದಾಗ ಅದರ ಹೊಕ್ಕಳ ಬಳ್ಳಿ ಕೂಡ ತಾಯಿಯಿಂದ ಬೇರ್ಪಟ್ಟಿರಲಿಲ್ಲ.ಇದರಿಂದಾಗಿ ಭೂಕಂಪದ ಅವಶೇಷಗಳಲ್ಲಿ ರಕ್ಷಿಸಲ್ಪಟ್ಟ ಈ ಮಗುವಿಗೆ ಅಯಾ ಎಂದು ಹೆಸರು ಇಡಲಾಗಿದೆ.

ಅಯಾ ಎಂದರೆ ಅರೇಬಿಕ್ ಭಾಷೆಯಲ್ಲಿ ಪವಾಡ ಎಂದರ್ಥ.ಮಗುವಿನ ರಕ್ಷಣೆ ವಿಚಾರ ಇಡೀ ಜಗತ್ತಿನಲ್ಲಿ ಭಾರೀ ಅಚ್ಚರಿ ಮೂಡಿಸಿದೆ.

ಭೂಕಂಪನದಲ್ಲಿ ಶಿಶುವಿನ ತಾಯಿ, ತಂದೆ ಮತ್ತು ಆಕೆಯ ನಾಲ್ವರು ಒಡಹುಟ್ಟಿದವರು ಮೃತಪಟ್ಟಿದ್ದಾರೆ.ಮಗುವನ್ನು ಇದೀಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಇದರ ಬೆನ್ನಲ್ಲೇ ಜಗತ್ತಿನಾದ್ಯಂತ ಹಲವರು‌ ಮಗುವನ್ನು ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com