ನಿಯಂತ್ರಣ ತಪ್ಪಿದ ಕಾರು ಶಾಲಾ ಮಕ್ಕಳಿಗೆ ಢಿಕ್ಕಿ, ಮೂವರು ವಿದ್ಯಾರ್ಥಿಗಳು ದುರ್ಮರಣ

ತಮಿಳುನಾಡು; ಮಂಗಳವಾರ ಬೆಳಗ್ಗೆ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿ ಬಳಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಮೂವರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಚಾಲಕನನ್ನು ಬಂಧಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ವಳಯಂಪತ್ತು ಪ್ರದೇಶದಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿವೆ ಎಂದು ಆರೋಪಿಸಿ ಸಾರ್ವಜನಿಕರು ಧರಣಿ ನಡೆಸಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ವಾಣಿಯಂಬಾಡಿ ಪೊಲೀಸರ ಪ್ರಕಾರ, ಕರ್ನಾಟಕ ನೋಂದಣಿ ಸಂಖ್ಯೆ ಹೊಂದಿರುವ ಎಸ್‌ಯುವಿ ಮಂಗಳವಾರ ನಾಲ್ಕು ಜನರೊಂದಿಗೆ ವೆಲ್ಲೂರಿನಿಂದ ಬೆಂಗಳೂರಿಗೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿತ್ತು.

ಬೆಳಗ್ಗೆ 9.15ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ವಳಯಂಪಟ್ಟು ಬಳಿ ಸರ್ವಿಸ್ ರಸ್ತೆಗೆ ಕಾರು ಬಂದಿದ್ದು, ಎಂಜಿಆರ್ ನಗರದ ವಲಯಂಪಟ್ಟು ನಿವಾಸಿಗಳಾದ ಎಸ್.ರಫೀಕ್ (13), ಆರ್.ವಿಜಯ್ (12) ಮತ್ತು ಅವರ ಸಹೋದರ ಆರ್.ಸೂರ್ಯ (12) ಎಂದು ಗುರುತಿಸಲಾದ ವಿದ್ಯಾರ್ಥಿಗಳು ಸರ್ವಿಸ್ ರಸ್ತೆಯಲ್ಲಿ ಶಾಲೆಗೆ ಹೋಗುತ್ತಿದ್ದಾಗ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com