ಸುರತ್ಕಲ್:ಬೈಕ್ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ ಮೃತಪಟ್ಟ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯವ ಎನ್ಐಟಿಕೆ ಟೊಲ್ ಗೇಟ್ ಬಳಿ ನಡೆದಿದೆ.
ಬಜ್ಪೆ ಕೆಂಜಾರು ಶ್ರೀ ದೇವಿ ಕಾಲೇಜು ವಿದ್ಯಾರ್ಥಿ ಮೂಲತಃ ಮಡಿಕೇರಿ ಸೋಮವಾರಪೇಟೆಯ ನಿವಾಸಿ ಶಶಾಂಕ್(21) ಮೃತ ವಿದ್ಯಾರ್ಥಿ.
ಶಶಾಂಕ್ ನಿನ್ನೆ ತಡರಾತ್ರಿ ತನ್ನ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆ ತೆರಳುವಾಗ ಬೈಕ್ ಅಪಘಾತವಾಗಿ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.