-ಮುಹಮ್ಮದ್ ಮುಸ್ಲಿಯಾರ್ ಅವರ ಪುತ್ರ ಮೊಹಮ್ಮದ್ ಸೈಪ್(13) ಮೃತ ಬಾಲಕ.
ಸುರತ್ಕಲ್;ದ್ವಿಚಕ್ರ ವಾಹನ ಅಪಘಾತದಲ್ಲಿ ಬಾಲಕ ಮೃತಪಟ್ಟ ಘಟನೆ ಸೂರಿಂಜೆಯ ಕೋಟೆ ಎಂಬಲ್ಲಿ ನಿನ್ನೆ ಸಂಜೆ ನಡೆದಿರುವುದು ವರದಿಯಾಗಿದೆ.
ಸೂರಿಂಜೆ ಕೋಟೆ ನಿವಾಸಿ ಮುಹಮ್ಮದ್ ಮುಸ್ಲಿಯಾರ್ ಅವರ ಪುತ್ರ ಮೊಹಮ್ಮದ್ ಸೈಪ್(13) ಮೃತ ಬಾಲಕ.
ಈದ್ ಹಬ್ಬದ ಹಿನ್ನೆಲೆಯಲ್ಲಿ ಆರು ಮಂದಿ ಸ್ನೇಹಿತರು ಮೂರು ದ್ವಿಚಕ್ರ ವಾಹನಗಳಲ್ಲಿ ಸೂರಿಂಜೆಯಿಂದ ಸುರತ್ಕಲ್ ಗೆ ಐಸ್ ಕ್ರೀಮ್ ತಿನ್ನಲು ತೆರಳುತ್ತಿದ್ದರು. ಈ ವೇಳೆ ಸೈಫ್ ಇದ್ದ ಸ್ಕೂಟರ್ ಸೂರಿಂಜೆಯ ಕೋಟೆ ಎಂಬಲ್ಲಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿಬಿದ್ದಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ರಭಸಕ್ಕೆ ಸೈಫ್ ತಲೆ ಡಾಂಬರ್ ರಸ್ತೆಗೆ ಬಡಿದು ಸ್ಥಳದಲ್ಲೇ ಮೃತಪಟ್ಟನೆಂದು ತಿಳಿದು ಬಂದಿದೆ.
ಸೈಪ್ ಸೂರಿಂಜೆಯ ಹಿದಾಯತ್ ಆಂಗ್ಲ ಮಾಧ್ಯಮ ಶಾಲೆಯಲ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದ.
ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.