ಗುಜರಾತ್; ಸೂರತ್ನಲ್ಲಿ ವ್ಯಕ್ತಿಯ ಕಾಲಿಗೆ ಹಗ್ಗ ಕಟ್ಟಿ ಟ್ರಕ್ನಿಂದ ಕಿಲೋಮೀಟರ್ಗಟ್ಟಲೇ ಎಳೆದೊಯ್ದುಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ.
ಗುಜರಾತ್ನ ಸೂರತ್ ಜಿಲ್ಲೆಯ ಹಜಿರಾ ಪ್ರದೇಶದಲ್ಲಿ ಘನೆಯ ವಿಡಿಯೋ ವೈರಲ್ ಆಗಿದೆ.ಘಟನೆಯಲ್ಲಿ ವ್ಯಕ್ತಿಯ ತಲೆ, ಕೈ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಟ್ರಕ್ನಿಂದ ಕಾಲಿಗೆ ಹಗ್ಗ ಬಿಗಿದು ವ್ಯಕ್ತಿಯನ್ನು ಎಳೆದೊಯ್ಯುವುದನ್ನು ಕಂಡ ಕಾರು ಚಾಲಕನೊಬ್ಬ ರಕ್ಷಣೆಗೆ ಧಾವಿಸಿದ್ದಾನೆ. ಟ್ರಕ್ ಬೆನ್ನತ್ತಿದ ಕಾರು ಚಾಲಕ ಟ್ರಕ್ ತಡೆದು ಟ್ರಕ್ಗೆ ಕಟ್ಟಿದ್ದ ಹಗ್ಗವನ್ನು ಕತ್ತರಿಸಿದ್ದಾನೆ. ಈ ವೇಳೆ ಚಾಲಕ ಟ್ರಕ್ ಸಮೇತ ಪರಾರಿಯಾಗಿದ್ದಾನೆ.