ಗೋಮಾಂಸವನ್ನು ಒತ್ತಾಯವಾಗಿ ಪತ್ನಿ ತಿನ್ನಿಸಿದಳೆಂದು ಯುವಕ ಆತ್ಮಹತ್ಯೆ!; ಪತ್ನಿ ವಿರುದ್ಧ ಕೇಸ್ ದಾಖಲು

ಸೂರತ್‌:ಜೂನ್ ನಲ್ಲಿ ನಡೆದ ಯುವಕನೋರ್ವನ ಆತ್ಮಹತ್ಯೆ ಇದೀಗ ವಿಭಿನ್ನ ಆಯಾಮವನ್ನು ಪಡೆದುಕೊಂಡಿದೆ.

ಯುವಕನ ಪತ್ನಿ ಮತ್ತು ಸೋದರ ಮಾವನ ವಿರುದ್ಧ ಸೂರತ್ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣವನ್ನು ದಾಖಲಿಸಿದ್ದಾರೆ.

ತನ್ನ ಪತ್ನಿ ಮತ್ತು ಮೈದುನ ಗೋಮಾಂಸವನ್ನು ಒತ್ತಾಯ ಮಾಡಿಸಿ ನನಗೆ ತಿನ್ನಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ರೋಹಿತ್ ಪ್ರತಾಪ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಈತ ಆತ್ಮಹತ್ಯೆ ಮುನ್ನ ಫೇಸ್ ಬುಕ್ ನಲ್ಲಿ ಸೂಸೈಡ್ ನೋಟ್ ಅಪ್ ಲೋಡ್ ಮಾಡಿದ್ದಾನೆ.ಅವರು ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ನಂತರ ಫೇಸ್ ಬುಕ್ ಪೋಸ್ಟ್ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.

ರೋಹಿತ್ ಮುಸ್ಲಿಂ ಯುವತಿ ಸೋನಂ ಎಂಬಾಕೆಯನ್ನು ಮದುವೆಯಾಗಿದ್ದ.ಆ ಬಳಿಕ ಆತ ಅತ್ಮಹತ್ಯೆ ಮಾಡಿಕೊಂಡಿದ್ದ.ಇದೀಗ ಘಟನೆ ನಡೆದು ಎರಡು ತಿಂಗಳ‌ ಬಳಿಕ ಕೇಸ್ ಗೆ ಟ್ವಿಸ್ಟ್ ನೀಡಲಾಗಿದೆ.

ರೋಹಿತ್ ಪತ್ನಿ ಸೋನಂ ಮತ್ತು ಆಕೆಯ ಸಹೋದರ ಮುಖ್ತಾರ್​​​​ ಸೇರಿಕೊಂಡು ರೋಹಿತ್​​ಗೆ ಗೋಮಾಂಸ ತಿನ್ನಿಸಿರುವ ಕಾರಣ ಮನನೊಂದು ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಎಂದು ಕೇಸ್ ದಾಖಲಾಗಿದೆ.

ರೋಹಿತ್ ತಾಯಿ ವೀಣಾ ಮಗನ ಕೊಲೆ ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಕೇಸ್ ನೀಡಿದ್ದಾರೆ.

ಟಾಪ್ ನ್ಯೂಸ್