ಸೂರತ್: ದೀಪಾವಳಿ ಹಬ್ಬ ಹಾಗೂ ಛತ್ ಹಬ್ಬಕ್ಕಾಗಿ ವಲಸೆ ಕಾರ್ಮಿಕರು ಊರಿಗೆ ಹೋಗುವ ಅವಸರದಲ್ಲಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮಹಿಳೆ ಸೇರಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂರತ್ ರೈಲು ನಿಲ್ದಾಣದಿಂದ ಭಾಗಲ್ಪುರಕ್ಕೆ ಹೋಗುವ ವಿಶೇಷ ರೈಲು ಏರುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ನೂಕುನುಗ್ಗಲಿನಲ್ಲಿ ಹಲವರಿಗೆ ಉಸಿರುಗಟ್ಟಿದಂತಾಗಿದ್ದು, ಕೆಲವರಿಗೆ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಸಕಾಲದಲ್ಲಿ ಸಿಪಿಆರ್ ವ್ಯವಸ್ಥೆ ಮಾಡಿದ್ದಾರೆ. ವಾರಾಂತ್ಯ ಹಾಗೂ ಜೊತೆಗೆ ಹಬ್ಬಗಳಿಗಾಗಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳುವ ತಯಾರಿಯಲ್ಲಿದ್ದು,ರೈಲು ನಿಲ್ದಾಣದಲ್ಲಿ ಜನಸಂದಣಿ ಉಂಟಾಗಿತ್ತು.
ಮೃತರನ್ನು ಬಿಹಾರದ ಭಾಗಲ್ಪುರದ ನಿವಾಸಿ ಅಂಕಿತ್ ವೀರೇಂದ್ರ ಕುಮಾರ್ ಸಿಂಗ್ ಹಾಗೂ ಗಾಯಾಳುಗಳನ್ನು ಅವರ ಸಹೋದರ ರಾಮ್ ಪ್ರಕಾಶ್ ವೀರೇಂದ್ರ ಕುಮಾರ್ ಸಿಂಗ್ ಹಾಗೂ ಇನ್ನೋರ್ವ ಮಹಿಳೆ ಸುಯಿಜಾ ಸಿಂಗ್ ಎಂದು ಗುರುತಿಸಲಾಗಿದೆ.
ಸೂರತ್ ರೈಲು ನಿಲ್ದಾಣದಿಂದ ಭಾಗಲ್ಪುರಕ್ಕೆ ಹೋಗುವ ವಿಶೇಷ ರೈಲು ಏರುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.ನೂಕುನುಗ್ಗಲಿನಲ್ಲಿ ಹಲವರಿಗೆ ಉಸಿರುಗಟ್ಟಿದಂತಾಗಿದ್ದು, ಕೆಲವರಿಗೆ ರೈಲು ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಸಕಾಲದಲ್ಲಿ ಸಿಪಿಆರ್ ವ್ಯವಸ್ಥೆ ಮಾಡಿದ್ದಾರೆ.ವಾರಾಂತ್ಯ ಹಾಗೂ ಜೊತೆಗೆ ಹಬ್ಬ ಹರಿದಿನಗಳಿಗಾಗಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳುವ ತಯಾರಿಯಲ್ಲಿದ್ದು, ರೈಲು ನಿಲ್ದಾಣದಲ್ಲಿ ಜನಸಂದಣಿ ಉಂಟಾಗಿತ್ತು.