ಗುಜರಾತ್‌ನ ಸೂರತ್‌ನಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಸದಸ್ಯರು ಶವವಾಗಿ ಪತ್ತೆಯಾಗಿದ್ದು, ಸಾಮೂಹಿಕ ಆತ್ಮಹತ್ಯೆ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಅಡಾಜನ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ 7 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ವಿಷ ಆಹಾರ ಸೇವಿಸಿದ ಸ್ಥಿತಿಯಲ್ಲಿ 6 ಮಂದಿಯ ಮೃತದೇಹ ಪತ್ತೆಯಾಗಿದ್ದು, ಒಂದು ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.
ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹಗಳ ಬಳಿ ಡೆತ್ ನೋಟ್ ಪತ್ತೆಯಾಗಿದೆ. ಮನೀಷ ಸೋಲಂಕಿ ಎಂಬವರು ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದರು. ಸೋಲಂಕಿ ಮತ್ತು ಕುಟುಂಬದ 6 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದವರ ಮೃತದೇಹಗಳು ಮಂಚದಲ್ಲಿ ಮತ್ತು ನೆಲದಲ್ಲಿ ಬಿದ್ದುಕೊಂಡಿದ್ದವು. ಸಾವಿಗೆ ನಿಖರ ಕಾರಣವನ್ನು ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಡಿಸಿಪಿ ಆರ್.ಪಿ.ಬಾರೋಟ್ ತಿಳಿಸಿದ್ದಾರೆ.
ಸೂರತ್ ಮೇಯರ್ ನಿರಂಜನ್ ಜಂಜ್ಮೇರಾ ಈ ಬಗ್ಗೆ ಮಾತನಾಡಿದ್ದು, ಸೋಲಂಕಿ ನೇಣು ಹಾಕಿಕೊಳ್ಳುವ ಮೊದಲು ಕುಟುಂಬದ ಸದಸ್ಯರಿಗೆ ವಿಷ ಆಹಾರ ನೀಡಿದಂತೆ ತೋರುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಕೊಟ್ಟ ಸಾಲವನ್ನುವಸೂಲಿ ಮಾಡಲು ಸಾಧ್ಯವಾಗದೆ ಸೋಲಂಕಿ ಅವರ ಕುಟುಂಬವು ಈ ಹೆಜ್ಜೆಯನ್ನು ಇಟ್ಟಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.