ಸಂಸದೆ ಸುಪ್ರಿಯಾ ಸುಳೆ ಅವರ ಸೀರೆಗೆ ತಗುಲಿದ ಬೆಂಕಿ

ಮಹಾರಾಷ್ಟ್ರ;ಪುಣೆಯ ಹಿಂಜೆವಾಡಿ ಪ್ರದೇಶದಲ್ಲಿ ಕರಾಟೆ ಸ್ಪರ್ಧೆಯ ಉದ್ಘಾಟನೆಯ ವೇಳೆ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರ ಸೀರೆಗೆ ಬೆಂಕಿ ಹೊತ್ತಿಕೊಂಡಿದೆ.

ಕಾರ್ಯಕ್ರಮ ಉದ್ಘಾಟಿಸಲು ವೇದಿಕೆಯಲ್ಲಿ ಮೇಜಿನ ಮೇಲೆ ಇರಿಸಲಾಗಿದ್ದ ದೀಪದಿಂದ ಬೆಂಕಿ ಸಂಸದೆಯ ಸೀರೆಗೆ ತಗುಲಿದೆ.ಕೂಡಲೇ ಸುಪ್ರಿಯಾ ಸುಳೆ ಬೆಂಕಿ ನಂದಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದೆ ಸುಪ್ರಿಯಾ, ನನ್ನ ಬೆಂಬಲಿಗರು, ನಾಗರಿಕರು, ಪಕ್ಷದ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಆತಂಕಪಡಬೇಡಿ, ನಾನು ಸುರಕ್ಷಿತವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್