ಒಂದೇ ದಿನ ಬೇರೆ ಬೇರೆ ಊರಿನಲ್ಲಿದ್ದ ಅವಳಿ ಸಹೋದರರು ಸಾವು; ಅಚ್ಚರಿ ಘಟನೆ

ರಾಜಸ್ಥಾನ;ಅವಳಿ ಸಹೋದರರಿಬ್ಬರು‌ ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಬಾಡಮೇರ್ ಮೂಲದವರಾಗಿದ ಸುಮೇರ್ ಸಿಂಗ್(26) ಎಂಬವರು ಸೂರತ್ ನಲ್ಲಿದ್ದು, ಅವರ ಸಹೋದರ ಸೋಹನ್ ಸಿಂಗ್(26) ಜೈಪುರದಲ್ಲಿ ವಾಸಿಸುತ್ತಿದ್ದರು.

ಸೂರತ್ ನಲ್ಲಿ ವಾಸಿಸುತ್ತಿದ್ದ ಸುಮೇರ್ ಸಿಂಗ್ ಮನೆಯ ತಾರಸಿ ಮೇಲೆ ಫೋನಿನಲ್ಲಿ ಮಾತನಾಡುವಾಗ ಆಯತಪ್ಪಿ ಮೃತಪಟ್ಟಿದ್ದರು. ಈ ವಿಷಯ ತಿಳಿದು ಮನೆಗೆ ಬಂದಿದ್ದ ಸೋಹನ್ ಸಿಂಗ್ ಕಾಲು ಜಾರಿ ನೀರಿನ ಟ್ಯಾಂಕಿಗೆ ಬಿದ್ದು ಮೃತಪಟ್ಟಿದ್ದಾರೆ.

ಆದರೆ ಸೋಹನ್ ಸಿಂಗ್ ಅವರ ಸಾವು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಟಾಪ್ ನ್ಯೂಸ್