ಸುಳ್ಯ; ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

ಸುಳ್ಯ: ಒಣಗಿದ ಅಡಿಕೆ ರಾಶಿ ಮಧ್ಯೆ ಯುವಕನೋರ್ವನ ಅರೆಬೆಂದ ಮೃತದೇಹ ಪತ್ತೆಯಾದ ಘಟನೆ‌‌ ಸುಳ್ಯ ತಾಲೂಕಿನ ಗುತ್ತಿಗಾರು‌ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಆಚಳ್ಳಿ ನಿವಾಸಿ ಸಿರಿಯಾಕ್ ಮ್ಯಾಥ್ಯೂ ಎಂಬವರ ಪುತ್ರ ಸೈಬಿನ್ ಎಂದು ಗುರುತಿಸಲಾಗಿದೆ.

ಮೃತದೇಹ ಅರೆಬೆಂದ ರೀತಿಯಲ್ಲಿ ಮನೆಯ ಕೊಟ್ಟಿಗೆಯಲ್ಲಿ ಪತ್ತೆಯಾಗಿದೆ.‌

ಮೃತ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದು, ಆದರೆ ಸಾವಿಗೆ ನಿಖರ ಕಾರಣ ತಿಳಿದು ಬರಬೇಕಿದೆ.

ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಟಾಪ್ ನ್ಯೂಸ್