ಸುಳ್ಯ:ಕಾರು ಮತ್ತು ಸ್ಕೂಟರ್ ಮಧ್ಯೆ ಅಪಘಾತ ನಡೆದು ಸ್ಕೂಟಿ ಸವಾರ ಮೃತಪಟ್ಟಿರುವ ಘಟನೆ ಅರಂತೋಡು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಮೃತ ಸ್ಕೂಟಿ ಸವಾರನನ್ನು ಮುತ್ತುಟು ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನವೀನ್ ಸಂಕೇಶ ಎಂದು ಗುರುತಿಸಲಾಗಿದೆ.
ಕಾರು ಢಿಕ್ಕಿ ಹೊಡೆದು ಸ್ಕೂಟರ್ ರಸ್ತೆಗೆ ಎಸೆಯಲ್ಪಟ್ಟು ಸ್ಕೂಟಿ ಸವಾರ ನವೀನ್ ಸಂಕೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂಕೇಶ್ ಸುಳ್ಯದ ನಿವಾಸಿಯಾಗಿದ್ದಾರೆ.ಅವರ ಮೃತದೇಹ ಇದೀಗ ಸುಳ್ಯದ ಆಸ್ಪತ್ರೆಯಲ್ಲಿರಿಸಲಾಗಿದೆ.