ಸುಳ್ಯ:ಮದುವೆಯ ಕಾರ್ಯಕ್ರಮ ಒಂದರಲ್ಲಿ ಮಗು ಧರಿಸಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿದ ಬಗ್ಗೆ ದೂರು ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಮಗುವಿನ ತಂದೆ ಐವರ್ನಾಡು ಗ್ರಾಮದ ಮಡ್ತಿಲ ನಿವಾಸಿ ಶಿವಪ್ರಸಾದ್ ಎಂ.ಆರ್. ದೂರು ನೀಡಿದ್ದಾರೆ
ಎ.30 ರಂದು ಸಂಬಂಧಿಕರ ಮದುವೆ ಕಾರ್ಯಕ್ರಮ ಸುಳ್ಯ ಕಾಯರ್ತೋಡಿ ದೇವಸ್ಥಾನ ಸಭಾಭವನದಲ್ಲಿ ನಡೆದಿದ್ದು ಶಿವಪ್ರಸಾದ್, ಪತ್ನಿ ಮತ್ತು 5 ವರ್ಷದ ಮಗು ಪೂರ್ವಿಕ್ ಜೊತೆ ತೆರಳಿದ್ದ.
ಮದುವೆ ಹಾಲ್ ನಲ್ಲಿ ಮಗ ನೀರು ಕುಡಿಯಲೆಂದು ಹೋದಾಗ ಲೋಟ ಮೇಲೆ ಇದ್ದ ಕಾರಣ ಆತನಿಗೆ ಸಿಗಲಿಲ್ಲ, ಅಲ್ಲಿದ್ದ ವ್ಯಕ್ತಿಯೊಬ್ಬರು ನಾನು ನೀರು ಕೊಡಿಸುತ್ತೇನೆ ಎಂದು ಅಲ್ಲಿಂದ ಹೊರಗೆ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಮಗುವಿನ ಕುತ್ತಿಗೆಯಲ್ಲಿದ 2 ಪವನ್ ತೂಕದ ಚಿನ್ನದ ಸರವನ್ನು ಹಾಗೂ ಅದಕ್ಕೆ ಅಳವಡಿಸಿದ್ದ ಪದಕ ಕಿತ್ತುಕೊಂಡು ಹೋಗಿದ್ದಾನೆ. ಈ ವೇಳೆ ಮಗುವಿಗೆ ಗಾಯವಾಗಿದೆ ಎಂದು ದೂರು ನೀಡಲಾಗಿದೆ.
ಸರ ಎಳೆದುಕೊಂಡು ಕಳ್ಳ ಪರಾರಿಯಾಗಿದ್ದಾನೆ.ಇದೀಗ ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.