ಸುಳ್ಯ; ಬೆಳ್ಳಾರೆ ಸರಕಾರಿ ಆಸ್ಪತ್ರೆಯ ಹಳೆ ಕಟ್ಟಡ ತೆರವು ವೇಳೆ ಗೋಡೆ ಕುಸಿದು ಬಿದ್ದು ಓರ್ವ ಮೃತಪಟ್ಟ ಘಟನೆ ವರದಿಯಾಗಿದೆ.
ಮಂಜುನಾಥ(23) ಮೃತರು.ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಹಳೆ ಕಟ್ಟಡವನ್ನು ತೆರವು ಕಾರ್ಯ ನಡೆಯುತ್ತಿತ್ತು.
ಇದರ ಭಾಗವಾಗಿ ಗೋಡೆ ಕೆಡವುತ್ತಿದ್ದಾಗ ಏಕಾಏಕಿ ಗೋಡೆ ಕಾರ್ಮಿಕ ಮಂಜುನಾಥ್ ಮೇಲೆ ಬಿದ್ದಿದೆ.ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕನಿಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಈ ವೇಳೆ ಅವರು ಮೃತಪಟ್ಟಿದ್ದಾರೆ