ಸುಳ್ಯ: ಇಬ್ಬರು ಸಹೋದರಿಯರು ಹೊಳೆಯಲ್ಲಿ ಮುಳುಗಿ ನೀರು ಪಾಲಾಗಿರುವ ಘಟನೆ ಕೇನ್ಯ ಕಟ್ಕಲ್ ಬಳಿಯ ಹೊಳೆಯಲ್ಲಿ ನಡೆದಿದೆ.
ಮೂಲತಃ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಪ ಸಮೀಪದ ಕೇನ್ಯ ಕಣ್ಕಲ್ ನವರಾಗಿದ್ದು ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ಸತೀಶ್ ಅಮ್ಮಣ್ಣಾಯ ಅವರ ಪುತ್ರಿಯರಾದ ಹಂಸಿತಾ (15) ಮತ್ತು ಅವಂತಿಕಾ (11) ಎಂಬ ಸಹೋದರಿಯರು ನೀರು ಪಾಲಾದರು.
ಇವರು ಬೆಂಗಳೂರಿನಲ್ಲಿ ಪೋಷಕರ ಜೊತೆ ವಾಸವಿದ್ದರು,
ನಿನ್ನೆ ಊರಿನಲ್ಲಿ ನಡೆಯುವ ಕಾರ್ಯಕ್ರಮವೊಂದರ ನಿಮಿತ್ತ ಬಳ್ಪಕ್ಕೆ ಬಂದಿದ್ದರು ಎನ್ನಲಾಗಿದೆ.
ಆದರೆ ಸಂಜೆ ವೇಳೆ ಹೊಳೆಗೆ ತೆರಳಿದಾಗ ದುರಂತ ನಡೆದಿದೆ. ಅಗ್ನಿಶಾಮಕ ದಳದಿಂದ ಹುಡುಕಾಟದ ಬಳಿಕ ಇಬ್ಬರ ಮೃತದೇಹಗಳು ರಾತ್ರಿ ವೇಳೆ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ತೆರಳಿದ್ದಾರೆ.ಇಬ್ಬರ ಸಹೋದರಿಯರ ಅಗಲಿಕೆಯಿಂದ ಕುಟುಮಬ ದುಃಖತಪ್ತವಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.