ಮಂತ್ರವಾದಿಯ ಮಾತು ಕೇಳಿ 9 ವರ್ಷದ ಬಾಲಕಿಯ ಹೃದಯವನ್ನು ಚಾಕುವಿನಿಂದ ಬಗೆದು ಹೊರ ತೆಗೆದ ಮಹಿಳೆ; ಭಯಾನಕ ಘಟನೆ ವರದಿ

ಒಂಬತ್ತು ವರ್ಷದ ಬಾಲಕಿಯೊಬ್ಬಳ ಹೃದಯವನ್ನು ಬಗೆದು ತೆಗೆದಿರುವ ಆಘಾತಕಾರಿ ಕ್ರೂರ ಘಟನೆ ಪಂಜಾಬ್​ನ ಅಮೃತಸರ ಬಳಿಯ ಮುಧಾಲ್ ಗ್ರಾಮದಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಸುಖಮನ್ದೀಪ್ ಕೌರ್(9) ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮಹಿಳೆ ಜಸ್ಬೀರ್ ಕೌರ್, ಆಕೆಯ ಪತಿ ದಲ್ಬೀರ್ ಸಿಂಗ್, ಮಗ ಮತ್ತು ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ

ಜುಲೈ 11ರಂದು ಸುಖಮನ್ದೀಪ್ ಕೌರ್ ಎನ್ನುವ ಬಾಲಕಿ ನಾಪತ್ತೆಯಾಗಿದ್ದಳು.ಹುಡುಕಾಟದ ಸಮಯದಲ್ಲಿ, ಪೊಲೀಸರು ಈ ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಬಾಲಕಿಯನ್ನು ಜಸ್ಬೀರ್ ನಿವಾಸಕ್ಕೆ ಕರೆದೊಯ್ಯುವುದನ್ನು ಮಾತ್ರ ಕಂಡು ಹಿಡಿದಿದ್ದರು.

ಸುಳಿವು ಆಧರಿಸಿ ಅಕ್ಕಪಕ್ಕದ ಮನೆಯವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಭಯಾನಕ ಮಾಹಿತಿ ಹೊರಬಿದ್ದಿದೆ.

ಜಸ್ಬೀರ್ ತನ್ನ ವಿಚಾರಣೆಯ ವೇಳೆ ಪೊಲೀಸರಿಗೆ ತಾನು ತಾಂತ್ರಿಕನಿಂದ ಹಲವು ವರ್ಷಗಳಿಂದ ಮಾಟಮಂತ್ರವನ್ನು ಕಲಿತಿದ್ದು, ತನ್ನ ಕುಟುಂಬದ ವ್ಯವಹಾರವನ್ನು ವಿಸ್ತರಿಸುವ ನೆಪದಲ್ಲಿ ಹುಡುಗಿಯನ್ನು ಕೊಲ್ಲಲು ಆತನಿಂದ ಪ್ರೇರಣೆ ಪಡೆದಿರುವುದಾಗಿ ತಿಳಿಸಿದ್ದಾಳೆ.

ಬಾಲಕಿ ಕಾಣೆಯಾದ ದಿನ ಸಂಜೆ ಬಾಲಿಕಿಯನ್ನು ತನ್ನ ಮನೆಗೆ ಕರೆಸಿಕೊಂಡು ಚಾಕುವಿನಿಂದ ಆಕೆಯ ಹೃದಯಕ್ಕೆ ಇರಿದು ಹೃದಯ ಬಗೆದಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದು ಆರೋಪಿಯು ತಿಳಿಸಿದ್ದಾಳೆ.

ಬಳಿಕ ಆಕೆಯ ಶವವನ್ನು ಗೋಣಿಚೀಲದಲ್ಲಿ ತುಂಬಿ ರಾತ್ರಿ ವೇಳೆ ಸಮೀಪದಲ್ಲಿ ಎಸೆದಿದ್ದು, ಅನುಮಾನ ಬರದಂತೆ ಬಾಲಕಿಯನ್ನು ಹುಡುಕಲು ಸಂತ್ರಸ್ತೆಯ ಮನೆಯವರ ಜೊತೆ ಸೇರಿಕೊಂಡು ಹುಡುಕಾಟವನ್ನು ನಡೆಸಿದ್ದಾಳೆ.

ಟಾಪ್ ನ್ಯೂಸ್