-ಸುಹಾನಾ ಆತ್ಮಹತ್ಯೆ ಮಾಡಿಕೊಂಡ ಯುವತಿ
ವಿಜಯಪುರ:ವಿವಾಹಿತೆ ಮಹಿಳೆಯೊಬ್ಬರು ಲೈವ್ ವಿಡಿಯೋ ಮಾಡಿ ನೇಣಿಗೆ ಶರಣಾಗಿರುವ ಘಟನೆ ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮದಲ್ಲಿ ನಡೆದಿದೆ.
ಸುಹಾನಾ ಸೋನಾರ್ (21)ಆತ್ಮಹತ್ಯೆಗೆ ಶರಣಾದ ವಿವಾಹಿತೆ ಮಹಿಳೆ.ಸುಹಾನಾಗೆ, ಅಲ್ತಾಫ್ ಎಂಬಾತನ ಜೊತೆ ಇತ್ತೀಚೆಗೆ ಸಲುಗೆಯಾಗಿತ್ತು. ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಪ್ರಿಯಕರ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ಮರ್ಯಾದೆಗೆ ಹೆದರಿ ಸುಹಾನಾ ಲೈವ್ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಕಏಪ್ರಿಲ್ 15ರಂದು ಸುಹಾನಾ ಮೊಬೈಲ್ ವಿಡಿಯೋ ಆನ್ ಮಾಡಿ ನೇಣಿಗೆ ಶರಣಾಗಿದ್ದಾಳೆ. ಉಪ್ಪಲದಿನ್ನಿ ಗ್ರಾಮದ ಅಲ್ತಾಫ್ ಸುಲೆಮಾನ್, ಸುಹಾನಾಗೆ ಪ್ರೀತಿಸುತ್ತಿದ್ದ. ಆದರೆ ಸುಹಾನಾಗೆ ಹೊಕ್ಕುಂಡಿ ಗ್ರಾಮದ ಷರೀಫ್ ಸೋನಾರ್ ಜೊತೆಗೆ ಇತ್ತೀಚೆಗೆ ಮದುವೆ ಮಾಡಿ ಕೊಟ್ಟಿದ್ದರು.
ಗಂಡನನ್ನು ಬಿಟ್ಟು ಬಾ, ಇಲ್ಲವಾದರೆ ನನ್ನೊಂದಿಗಿರುವ ಫೋಟೋ ನಿನ್ನ ಗಂಡನಿಗೆ ತೋರಿಸುತ್ತೇನೆ ಎಂದು ಸುಹಾನಾಳಿಗೆ ಅಲ್ತಾಫ್ ಸುಲೆಮಾನ್ ಬ್ಲ್ಯಾಕ್ಮೇಲ್ ಮಾಡುತ್ತಿದ್ದ.
ಇದರಿಂದ ಬೆಸತ್ತಿದ್ದ ಸುಹಾನಾ, ಮೂವರ ಹೆಸರು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಳೆ. ಈ ಕುರಿತು ಸುಹಾನಾ ತಂದೆ ಅಸ್ಲಂ ಮುಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಅಲ್ತಾಪ್ ಹಾಗೂ ಯುನೀಸ್ ಎಂಬಾತನಿಗೆ ಬಂಧಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.