ಮೋದಿ 2023ರ ಮಧ್ಯದ ವೇಳೆ ರಾಜೀನಾಮೆ ನೀಡಬೇಕಾಗಬಹುದು; ಭಾರೀ ಸಂಚಲನ ಉಂಟುಮಾಡಿದ ಸುಬ್ರಮಣಿಯನ್ ಸ್ವಾಮಿ ಟ್ವೀಟ್

ನವದೆಹಲಿ:ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ವಜಾಗೊಳಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕಾಗಬಹುದು ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಸಂಸದ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ನಲ್ಲಿ ಹೇಳಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ, ಆರು ಅವಧಿಯ ಸಂಸದರಾದ ಸುಬ್ರಹ್ಮಣಿಯನ್ ಸ್ವಾಮಿ, ಅಜಿತ್ ದೋವಲ್ ಪೆಗಾಸಸ್ ಟೆಲಿಫೋನ್ ಟ್ಯಾಪಿಂಗ್ ಹಗರಣ ಸೇರಿದಂತೆ ಹಲವು ಬಾರಿ ಸಮಸ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಜಿತ್‌ ದೋವಲ್‌ ಮಾಡಿರುವ ಗಂಭೀರ ಸಮಸ್ಯೆ ಶೀಘ್ರದಲ್ಲೇ ವಾಶಿಂಗ್ಟನ್‌ ಡಿಸಿಯಿಂದ ಹೊರಬೀಳಲಿದೆ ಎಂದು ಅವರು ಹೇಳಿದ್ದಾರೆ.

ಮೋದಿ ಅವರು ತಮ್ಮ ಎನ್‌ಎಸ್‌ಎ ಹುದ್ದೆಯಿಂದ ದೋವಲ್ ಅವರನ್ನು ವಜಾಗೊಳಿಸಬೇಕು.ಅವರು ಪೆಗಾಸಸ್ ಟೆಲಿಫೋನ್ ಟ್ಯಾಪಿಂಗ್ ಒಳಗೊಂಡಂತೆ ಹಲವಾರು ಬಾರಿ ಮೂರ್ಖತನ ಮಾಡಿದ್ದಾರೆ.

ರಾಜೀನಾಮೆ ಪಡೆಯದಿದ್ದರೆ 2023ರ ಮಧ್ಯದ ವೇಳೆಗೆ ಮೋದಿ ಕೂಡ ರಾಜೀನಾಮೆ ನೀಡಬೇಕಾಗಬಹುದು ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್