ಮೋದಿ ”ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ”- ಸುಬ್ರಹ್ಮಣ್ಯಯನ್ ಸ್ವಾಮಿ; ಪ್ರಧಾನಿ ಮೋದಿಗೆ ಬಗ್ಗೆ ಬಿಜೆಪಿ ಸಂಸದರು ಮಾಡಿದ ಟ್ವೀಟ್ ನಲ್ಲಿ ಏನೇನಿದೆ?

ನವದೆಹಲಿ;ಪ್ರಧಾನಿ ನರೇಂದ್ರ ಮೋದಿ ಮತ್ತು ಸರಕಾರವನ್ನು ಹಲವು ಬಾರಿ ಟೀಕಿಸಿ ಸುದ್ದಿಯಾಗಿದ್ದ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಮತ್ತೆ ಮೋದಿಯನ್ನು ಗೇಲಿ ಮಾಡಿದ್ದಾರೆ.

ಮೋದಿ ”ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥ’ ಎಂದು ಬಿಜೆಪಿ ನಾಯಕ ಸುಬ್ರಮಣಿಸ್ವಾಮಿ ಗೇಲಿ ಮಾಡಿದ್ದಾರೆ.

ಕುರಿತು ಇಂದು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಭಾರತ ಆರ್ಥಿಕತೆಗೆ ಪ್ರತಿವರ್ಷ ಜಿಡಿಪಿಯ ಶೇ. 10 ರಷ್ಟು ಪ್ರಗತಿ ಸಾಧಿಸುವ ಸಾಮರ್ಥ್ಯವಿದೆ. ಇದರ ಮೂಲಕ 10 ವರ್ಷಗಳಲ್ಲಿ ನಿರುದ್ಯೋಗ ಮತ್ತು ಬಡತನವನ್ನು ಕೊನೆಗೊಳಿಸುವ ಶಕ್ತಿ ಹೊಂದಿದೆ. ಆದರೆ, ಹಣಕಾಸು ಇಲಾಖೆಗೆ ಇದರ ಸುಳಿವೇ ಇಲ್ಲ ಎಂದು ಹೇಳಿದ್ದಾರೆ.

ಮೋದಿ ಅರ್ಥಶಾಸ್ತ್ರದಲ್ಲಿ ಅನಕ್ಷರಸ್ಥರು ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ನೀತಿ ಹಾಗೂ ಹಣಕಾಸು ಇಲಾಖೆ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗೆ ಮೋದಿ ಅಭಿಮಾನಿಗಳ ಬಗ್ಗೆ ಟ್ವೀಟ್ ಮಾಡಿ ಸುಬ್ರಹ್ಮಣಿಯನ್ ಸ್ವಾಮಿ ಸುದ್ದಿಯಾಗಿದ್ದರು.ನಾನು ಮೊದಿಯ ಹೆಸರು ಹೇಳದೆ ಚುನಾವಣೆಯಲ್ಲಿ ಗೆದ್ದು 6 ಭಾರಿ ಸಂಸದನಾಗಿದ್ದೆ ಎಂದು ಹೇಳಿದ್ದರು.

ಟಾಪ್ ನ್ಯೂಸ್