ಇದೇನು ದಿನಸಿ ಅಂಗಡಿಯ ರಸೀದಿಯಾ? ಬಜೆಟ್ ಬಗ್ಗೆ ವ್ಯಂಗ್ಯವಾಡಿದ ಬಿಜೆಪಿ ಸಂಸದ

ನವದೆಹಲಿ:2023ರ ಸಾಲಿನ ಕೇಂದ್ರ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ‌.ಬಜೆಟ್ ಬಗ್ಗೆ ವಿಪಕ್ಷಗಳು ವಿಭಿನ್ನವಾಗಿ ಟೀಕಿಸಿದೆ. ಆದರ ಇದೀಗ ಆಡಳಿತ ಬಿಜೆಪಿ ಪಕ್ಷದ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಬಜೆಟ್ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಇಂದು ಮಂಡಿಸಿರುವುದು ಬಜೆಟಾ ಅಥವಾ ದಿನಸಿ ಅಂಗಡಿ ಮಾಲೀಕನ ರಸೀದಿಯಾ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಇದು ಒಂದು ಬಜೆಟ್? ಇದು ದಿನಸಿ ಅಂಗಡಿ ಮಾಲೀಕನ ಬಿಲ್-ಒಂದು ಯೋಗ್ಯ ಬಜೆಟ್ ತನ್ನ ಉದ್ದೇಶಗಳೇನು ಎಂಬುದನ್ನು ಬಹಿರಂಗಪಡಿಸಬೇಕು. ಅದು ಜಿಡಿಪಿ ಬೆಳವಣಿಗೆ ದರವಾಗಿದ್ದರೆ, ಹೂಡಿಕೆಯ ಮಟ್ಟ ಮತ್ತು ರಿಟರ್ನ್ ದರ, ಆದ್ಯತೆಗಳು, ಆರ್ಥಿಕ ತಂತ್ರಗಾರಿಕೆ ಮತ್ತು ಸಂಪನ್ಮೂಲ ಕ್ರೋಢೀಕರಣವನ್ನು ಬಹಿರಂಗಪಡಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಟಾಪ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತೆ ಮುಂದೂಡಿಕೆ;ಪಟ್ಟಿ ಬಿಡುಗಡೆ ವಿಳಂಬವಾಗುತ್ತಿರುವುದೇಕೆ? ಈ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?

ಬೆಂಗಳೂರು;ವಿಧಾನಸಭಾ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ

Developed by eAppsi.com