ಸುಳ್ಯ; ಅನ್ಯಕೋಮಿನ ವಿದ್ಯಾರ್ಥಿನಿ ಜೊತೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಗೆ ಗಂಭೀರ ಹಲ್ಲೆ; 7 ಮಂದಿ ವಿರುದ್ಧ ಕೇಸ್ ದಾಖಲು

ಸುಳ್ಯ:ಅನ್ಯ ಕೋಮಿನ ಕಾಲೇಜು ವಿದ್ಯಾರ್ಥಿನಿ ಜೊತೆ ಮಾತನಾಡಿದ ಕಾರಣಕ್ಕೆ ಅದೇ ಕಾಲೇಜಿನ ವಿದ್ಯಾರ್ಥಿಗೆ, ವಿದ್ಯಾರ್ಥಿಗಳ ತಂಡ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಸುಳ್ಯದಿಂದ ವರದಿಯಾಗಿದೆ.



ಮೊಹಮ್ಮದ್ ಸನೀಫ್(19) ಹಲ್ಲೆಗೊಳಗಾದ ಯುವಕ. ಸನೀಫ್ ಕೇಸ್ ಆಧಾರದಲ್ಲಿ 7 ಜನರ ಮೇಲೆ ಕೇಸ್ ದಾಖಲಾಗಿದೆ

ದೀಕ್ಷಿತ್,ಧನುಷ್,ಪ್ರಜ್ವಲ್,ತನುಜ್,ಅಕ್ಷಯ್,ಮೋಕ್ಷಿತ್, ಗೌತಮ್‌ ಮತ್ತು ಇತರರ ಮೇಲೆ‌ ಕೇಸ್ ದಾಖಲಾಗಿದೆ.

ಸುಳ್ಯದ ಕೊಡಿಯಾಲಬೈಲು ಕಾಲೇಜಿನಲ್ಲಿ
ಸನೀಫ್ ಗೆ ಕಾಲೇಜಿನ ಗ್ರೌಂಡ್ ಗೆ ಮಾತನಾಡಲಿದೆ ಎಂದು ಕರೆದುಕೊಂಡು ಹೋಗಿ ಅದೇ ಕಾಲೇಜಿನ ವಿದ್ಯಾರ್ಥಿಗಳು ಕಾಲಿನಿಂದ ಒದ್ದು, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ‌ ಎಂದು ಆರೋಪಿಸಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.







ಟಾಪ್ ನ್ಯೂಸ್