ಪುತ್ತೂರು; ಕಾಲೇಜು ವಿದ್ಯಾರ್ಥಿ ದಿಡೀರ್ ಅಸ್ವಸ್ಥಗೊಂಡು ಮೃತ್ಯು

ಪುತ್ತೂರು:ಕಾಲೇಜು ವಿದ್ಯಾರ್ಥಿಯೋರ್ವ ದಿಢೀರ್‌ ಅಸ್ವಸ್ಥಗೊಂಡು ಮೃತಪಟ್ಟಿರುವ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ.

ಬೆಳ್ಳಾರೆಯ ಉದ್ಯಮಿ, ಪ್ರಸಾದ್‌ ಹಾರ್ಡ್‌ವೇರ್ಸ್‌ನ ಮಾಲಕ ಸುಬ್ರಹ್ಮಣ್ಯ ಜೋಶಿಯವರ ಪುತ್ರ ಶರತ್‌ ಜೋಶಿ (21) ಮೃತ ಯುವಕ.

ಶರತ್ ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದರು.ಶರತ್‌ ಜೋಷಿ ಪರೀಕ್ಷೆ ಬರೆದು ನಿನ್ನೆ ಮನೆಗೆ ಬಂದಿದ್ದರು.ಆದರೆ ರಾತ್ರಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ತರಲಾಗಿತ್ತು.ಆದರೆ ಈ ವೇಳೆ ಅವರು ಮೃತಪಟ್ಟಿದ್ದಾರೆ.

ಯುವಕನಿಗೆ ಹೃದಯಾಘಾತದ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ವರದಿ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ.

ಟಾಪ್ ನ್ಯೂಸ್