ಹಾಸ್ಟೆಲ್ ನಲ್ಲೇ ಹೆರಿಗೆಯಾದ 9ನೇ ತರಗತಿ ಬಾಲಕಿ; ಸಿಬ್ಬಂದಿಗಳ ನಡೆ ಬಗ್ಗೆ ಸಂಶಯ

ಹೈದರಾಬಾದ್:ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಶಾಲಾ ಬಾಲಕಿ ಗಂಡು ಮಗುವಿಗೆ ಶಾಲಾ ಶೌಚಾಲಯದಲ್ಲಿ ಜನ್ಮನೀಡಿದ್ದು, ಇದೀಗ ಭಾರೀ ಸುದ್ದಿಯಾಗಿದೆ.

ವಾಲ್ಮಿಕಿಪುರಂನಲ್ಲಿರುವ ಬಾಲಯೋಗಿ ಗುರುಕುಲ ಶಾಲೆಯಲ್ಲಿ
9ನೇ ತರಗತಿಯ ಬಾಲಕಿಗೆ ಹೆರಿಗೆಯಾಗಿದೆ.

ಬಾಲಕಿ ಮುಟ್ಟು ಆಗದೇ ಇರುವುದನ್ನು ಗಮನಿಸಿದ ಹಾಸ್ಟೆಲ್ ಸಿಬ್ಬಂದಿಗಳು ಪಾಲಕರಿಗೆ ವಿಷಯ ತಿಳಿಸಿದ್ದಾರೆ.ಆದರೂ ಅವರು ಅದನ್ನು ದೊಡ್ಡ ವಿಚಾರವಾಗಿ ತೆಗೆದುಕೊಂಡಿಲ್ಲ.

ಇದೀಗ ಅಪ್ರಾಪ್ತ ಬಾಲಕಿ ಹಾಸ್ಟೆಲ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಿರುಪತಿ ಜಿಲ್ಲೆಯ ಶ್ರೀಕಾಳಹಸ್ತಿ ಕ್ಷೇತ್ರದ ವರದಯ್ಯಪಾಲೆಂನ 14 ವರ್ಷದ ಬಾಲಕಿ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದಳು.

ಇದೀಗ ಐಸಿಡಿಸಿ ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆದು ವಿದ್ಯಾರ್ಥಿನಿಯನ್ನು ತಿರುಪತಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಟಾಪ್ ನ್ಯೂಸ್