ಬೀದಿ ನಾಯಿವೊಂದಕ್ಕೆ ಪಾಸ್ ಪೋರ್ಟ್ ಮಾಡಿ ಇಟಲಿಗೆ ಕರೆದುಕೊಂಡು ಹೋಗುತ್ತಿರುವ ಮಹಿಳೆ

ಮಹಿಳೆಯೋರ್ವರು ಬೀದಿ ನಾಯಿಗೆ ಪಾಸ್‌ಪೋರ್ಟ್ ಮಾಡಿ ಇಟಲಿಗೆ ಕರೆದುಕೊಂಡು ಹೋಗುತ್ತಿದ್ದು, ಇದೀಗ ಎಲ್ಲೆಡೆ ಸುದ್ದಿಯಾಗಿದ್ದಾರೆ‌.

ಉತ್ತರ ಪ್ರದೇಶ ಮೂಲದ ಮೋತಿ ಎಂಬ ನಾಯಿ ಇತ್ತೀಚೆಗೆ ಪಾಸ್‌ಪೋರ್ಟ್ ಪಡೆದಿಕೊಂಡಿದ್ದು, ಈ ತಿಂಗಳು ಇಟಲಿಗೆ ಹೋಗಲು ಸಿದ್ಧವಾಗಿದೆ.

ಇಟಾಲಿಯನ್ ಲೇಖಕಿ ವೆರಾ ಲಝಾರೆಟ್ಟಿ ಅವರು ಈ ಮೋತಿ ಎಂಬ ನಾಯಿಯನ್ನು ದತ್ತು ಪಡೆದಿದ್ದಾರೆ.

ಇಟಾಲಿಯನ್ ಲೇಖಕಿ ಕಳೆದ ಹತ್ತು ವರ್ಷಗಳಿಂದ ಸಂಶೋಧನಾ ಕಾರ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದರು. ವಾರಾಣಸಿಯಲ್ಲಿ ಈ ಬೀದಿ ನಾಯಿ ಜತೆಗೆ ಒಲವು ಬೆಳೆಸಿಕೊಂಡು ಅದನ್ನು ಸಾಕಲು ಮುಂದಾಗಿದ್ದಾರೆ.

ಆನ್‌ಲೈನ್ ಸಂದರ್ಶನವೊಂದರಲ್ಲಿ ಮಾತನಾಡಿದಾಗ ಮೋತಿ ಈ ಹಿಂದೆ ಹಿಂಸೆಗೆ ಒಳಗಾಗಿತ್ತು. ಇಲ್ಲಿನ ಜನರು ಆ ನಾಯಿಗೆ ಹೊಡೆದು ಹಿಂಸೆ ನೀಡುತ್ತಿದ್ದರು, ಈ ಕಾರಣಕ್ಕೆ ಅವರಿಂದ ಕಾಪಾಡಿ ನಾನು ಮೋತಿಯನ್ನು ಸಾಕಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

ಮಹಿಳೆ ಮೋತಿಯನ್ನು ದತ್ತ ಪಡೆದು ಇಟಲಿಗೆ ಕರೆದುಕೊಂಡು ಹೋಗಲು ವಿಮಾನದ ಮೂಲಕ ಹಾರಾಟ ನಡೆಸಲಿದ್ದಾರೆ. ಪ್ರಾಣಿಗಳನ್ನು ವಿದೇಶಕ್ಕೆ ಕರೆದುಕೊಂಡು ಹೋಗುವಾಗ ವ್ಯಾಕ್ಸಿನೇಷನ್ ಸೇರಿದಂತೆ ಇನ್ನೂ ಅನೇಕ ತಪಾಸಣೆ ಮತ್ತು ದಾಖಲೆ ಮಾಡಬೇಕಿದೆ.ಇದನ್ನು ಅವರು ಪೂರ್ಣಗೊಳಿಸುತ್ತಿದ್ದಾರೆ.

ಟಾಪ್ ನ್ಯೂಸ್