ಬೆಂಗಳೂರು; ಬಹುನಿರೀಕ್ಷಿತ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದೆ.
ಫಲಿತಾಂಶವನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸುದ್ದಿಗೋಷ್ಟಿಯಲ್ಲಿ ಬಿಡುಗಡೆ ಮಾಡಿದೆ.
625 ಕ್ಕೆ 625 ಅಂಕವನ್ನು ನಾಲ್ವರು ವಿದ್ಯಾರ್ಥಿಗಳು ಪಡೆದಿದ್ದಾರೆ. 83.9 ರಷ್ಟು ಫಲಿತಾಂಶ ಬಂದಿದೆ. 7. ಲಕ್ಷದ 619 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಈ ಬಾರಿಯೂ ಬಾಲಕಿಯರೇ ಮುಂದು. ಚಿತ್ರದುರ್ಗ ಅತಿ ಹೆಚ್ಚು ಶೇಕಡಾ ಫಲಿತಾಂಶದಲ್ಲಿ ಮೊದಲನೆ ಸ್ಥಾನದಲ್ಲಿದೆ.ಮಂಡ್ಯ ಎರಡನೇ ಸ್ಥಾನದಲ್ಲಿದೆ.ಹಾಸನ ಮೂರನೇ ಸ್ಥಾನದಲ್ಲಿದೆ.ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.ಈ ಬಾರಿ 10% ಗ್ರೇಸ್ ಮಾರ್ಕ್ ನೀಡಲಾಗಿದೆ
59,000 ವಿದ್ಯಾರ್ಥಿಗಳಿಗೆ ಈ ರೀತಿ ನೀಡಲಾಗಿದೆ.
625- 625 ಪಡೆದ ವಿದ್ಯಾರ್ಥಿಗಳು
ಅನುಪಮಾ ಶ್ರೀ ಶೈಲ್-
ಯಶಸ್ ಗೌಡ- ಚಿಕ್ಕಬಳ್ಳಾಪುರ
ಬೆಂಗಳೂರಿನ ಭೂಮಿಕ ಪೈ
ಬೀಮಂತ್ ಗೌಡ-ವಿಜಯಪುರ