BREAKING ನಾಳೆ ಪ್ರಕಟವಾಗಲಿದೆ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ

ಬೆಂಗಳೂರು; ಬಹು ನಿರೀಕ್ಷಿತ SSLC ಪರೀಕ್ಷೆ ಫಲಿತಾಂಶ ನಾಳೆ ಪ್ರಕಟವಾಗಲಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪ್ರಸಕ್ತ ಸಾಲಿನ ಫಲಿತಾಂಶ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಾಳೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸೋ ಫಲಿತಾಂಶ ಬಿಡುಗಡೆ ಆಗುತ್ತಿದೆ.

ನಾಳೆ ಬೆಳಗ್ಗೆ 10 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEEB) ಮಹತ್ವದ ಸುದ್ದಿಗೋಷ್ಟಿ ಕರೆದಿದೆ. ಬೆಳಗ್ಗೆ 11 ಗಂಟೆಗೆ ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ SSLC ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದೆ.

2022- 2023ನೇ ಸಾಲಿನ SSLC ಪರೀಕ್ಷೆಗಳನ್ನು ಕಳೆದ ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ನಡೆಸಲಾಗಿತ್ತು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 21ರಂದು ಆರಂಭವಾಗಿತ್ತು. ಮೇ 10ರಂದು ರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ.

ಈ ಹಿನ್ನೆಲೆ ಎಲೆಕ್ಷನ್ ಗೆ ಎರಡು ದಿನ ಮೊದಲೇ ರಾಜ್ಯದ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ SSLC ಫಲಿತಾಂಶ ಪ್ರಕಟವಾಗಲಿದೆ

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com