ಧರ್ಮಸ್ಥಳ: ಎಸ್.ಎಸ್.ಎಫ್ ಕನ್ಯಾಡಿ ಯುನಿಟ್ ಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮಹಾಸಭೆಯು ಬದ್ರಿಯಾ ಜುಮಾ ಮಸೀದಿ ಕನ್ಯಾಡಿ ವಠಾರದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಅಸ್ಸಾರ್
ಸಅದಿ ಮಾಚಾರ್ ವಹಿಸಿ ಪ್ರಾರ್ಥನೆ ಮಾಡಿದರು.
ಜನರೆಡೆಯಲ್ಲಿ ಶಾಂತಿಯನ್ನು ಬಿತ್ತಿ ಒಂದಾಗಿ ಬದುಕುವಲ್ಲಿ ಎಸ್ ಎಸ್ ಎಫ್ ವಿದ್ಯಾರ್ಥಿ ಸಂಘವು ಶ್ರಮಿಸಬೇಕು. ಎಂದು ಇಮ್ದಾದ್ ಕನ್ಯಾಡಿ ಹೇಳಿದರು.
ಯಸಸ್ವಿನತ್ತ ನಮ್ಮ ಪಯಣದ ಹಾದಿ ಸಾಗುತ್ತಿರಬೇಕು ಎಂದು ಶಾಹುಲ್ ಮುಈನಿ ಉಸ್ತಾದ್ ಉದ್ಘಾಟನಾ ಭಾಷಣದಲ್ಲಿ ಹೇಳಿದರು.
ಬಳಿಕ ಅಧ್ಯಕ್ಷರ ನೇತೃತ್ವದಲ್ಲಿ ನೂತನ ಕಮೀಟಿ ರಚಿಸಲಾಯಿತು
ಅಧ್ಯಕ್ಷರು : ಶಾಹುಲ್ ಮುಹೀನಿ ಉಸ್ತಾದ್
ಕಾರ್ಯದರ್ಶಿ : ಸಿರಾಜ್ ಅಜಿಕುರಿ
ಕೋಶಾಧಿಕಾರಿ : ಸಫ್ವಾನ್ ಅಜಿಕುರಿ ಅವರನ್ನು ನೇಮಕ ಮಾಡಲಾಯಿತು.
ಈ ವೇಳೆ ಮುಬೀನ್ ಉಜಿರೆ, ಇಬ್ರಾಹಿಂ ಸಖಾಫಿ ಕಡಬ ಸೇರಿ ಹಲವರು ಉಪಸ್ಥಿತರಿದ್ದರು.