BIG NEWS ಬಿಜೆಪಿ ನಾಯಕಿ ಸೋನಾಲಿ ಫೋಗಟ್ ವ್ಯವಸ್ಥಿತ ಕೊಲೆ; ಸಿಸಿಟಿವಿಯಲ್ಲಿ ಸ್ಪೋಟಕ ಮಾಹಿತಿ ಸೆರೆ

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ವ್ಯವಸ್ಥಿತ ಕೊಲೆ; ಸಿಸಿಟಿವಿಯಲ್ಲಿ ಸ್ಪೋಟಕ ಮಾಹಿತಿ ಸೆರೆ




ದೆಹಲಿ:ಸೋನಾಲಿ ಫೋಗಟ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.ಈ ಕುರಿತು ಗೋವಾ ಪೊಲೀಸರು ಮಾಹಿತಿ ನೀಡಿದ್ದು, ಸೊನಾಲಿಗೆ ಜ್ಯೂಸ್ ನಲ್ಲಿ ವಿಷ ಹಾಕಿ ಕೊಟ್ಟಿರುವುದಾಗಿ ದೃಢಪಡಿಸಿದ್ದಾರೆ‌.




ಸೊನಾಲಿಯ ಆಪ್ತ ಸಹಾಯಕ ಸುಧೀರ್ ಸಾಂಗ್ವಾನ್ ಮತ್ತು ಅವರ ಸ್ನೇಹಿತ ಸುಖವಿಂದರ್ ವಾಸಿ ಅವರು ಉದ್ದೇಶಪೂರ್ವಕವಾಗಿ ಆಕೆಯ ಜ್ಯೂಸ್​ನಲ್ಲಿ ವಿಷವನ್ನು ಹಾಕಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಗೋವಾ ಪೊಲೀಸರು ಶುಕ್ರವಾರ ಹೇಳಿದ್ದಾರೆ.




ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ,ಆರೋಪಿ ಸುಧೀರ್ ಸಂಗ್ವಾನ್ ಮತ್ತು ಅವರ ಸಹವರ್ತಿ ಸುಖ್ವಿಂದರ್ ಸಿಂಗ್ ಅವರು ಕ್ಲಬ್‌ನಲ್ಲಿ ಸೋನಾಲಿ ಫೋಗಟ್ ಜೊತೆ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ.ಜ್ಯೂಸ್ ಕುಡಿಯುವಂತೆ ಬಲವಂತ ಮಾಡುತ್ತಿರುವುದು ವಿಡಿಯೋದಲ್ಲಿ ತಿಳಿದು ಬಂದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಓಂವಿರ್ ಸಿಂಗ್ ಬಿಷ್ಣೋಯ್ ಹೇಳಿದ್ದಾರೆ.




ಸುಖ್ವಿಂದರ್ ಮತ್ತು ಸುಧೀರ್ ಅವರು ಉದ್ದೇಶಪೂರ್ವಕವಾಗಿ ಜ್ಯೂಸ್​ಗೆ ವಿಷವನ್ನು ಹಾಕಿ ಸೋನಾಲಿ ಫೋಗಟ್ ಕುಡಿಯುವಂತೆ ಮಾಡಿದ್ದಾರೆ ಎಂದು ಒಪ್ಪಿಕೊಂಡರು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸೋನಾಲಿ ಅವರ ದೇಹದ ಮೇಲೆ ಗಾಯದ ಗುರುತು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.







ಟಾಪ್ ನ್ಯೂಸ್